ವಿಂದೊಕ್(ಏ.25): ಅಮೆರಿಕ ಕ್ರಿಕೆಟ್ ತಂಡ ಇದೇ ಮೊದಲ ಬಾರಿಗೆ ಏಕದಿನ ಮಾನ್ಯತೆ ಪಡೆದುಕೊಂಡಿದೆ. ನಮೀಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಟೂರ್ನಿಯಲ್ಲಿ ಸತತ 3ನೇ ಗೆಲುವು ಸಾಧಿಸುವ ಮೂಲಕ ಐಸಿಸಿ ಮಾನ್ಯತೆ ಪಡೆದುಕೊಂಡಿದೆ. 

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ವೆಸ್ಟ್ಇಂಡೀಸ್ ತಂಡ ಪ್ರಕಟ-ಗೇಲ್, ರಸೆಲ್‌ಗೆ ಸ್ಥಾನ!

6 ತಂಡಗಳ ಲೀಗ್‌ನಲ್ಲಿ ಅಮೇರಿಕ 4ನೇ ಸ್ಥಾನ ಪಡೆದಿದೆ. ಅಗ್ರ  4 ಸ್ಥಾನ ಗಿಟ್ಟಿಸಿಕೊಂಡಿರುವ  ತಂಡಗಳಿಗೆ ಏಕದಿನ ಸ್ಥಾನಮಾನ ನೀಡಲಾಗಿದೆ. ವೆಸ್ಟ್ ಇಂಡೀಸ್ ಮಾಜಿ ಬ್ಯಾಟ್ಸ್‌ಮನ್ ಕ್ಸೇವಿಯರ್ ಮಾರ್ಷಲ್ ಶತಕದ ನೆರವಿನಿಂದ ಅಮೆರಿಕಾ 8 ವಿಕೆಟ್ ನಷ್ಟಕ್ಕೆ 280 ರನ್ ಸಿಡಿಸಿತ್ತು. ಈ ಗುರಿ ಬೆನ್ನತ್ತಿದ ಹಾಂಕಾಗ್ 7 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ವಿಶ್ವಕಪ್ 2019: ಟ್ರೋಫಿ ಗೆಲ್ಲೋ ತಂಡ ಯಾವುದು? ಅಖ್ತರ್ ನುಡಿದ ಭವಿಷ್ಯ!

ಓಮಾನ್ ತಂಡ  ಕೂಡ  ಏಕದಿನ ಸ್ಥಾನಮಾನ ಪಡೆದುಕೊಂಡಿದೆ. ಉಳಿದ 2 ಸ್ಥಾನಕ್ಕಾಗಿ ನಮೀಬಿಯಾ, ಪಪುಪಾ ನ್ಯೂ ಗಿನಿಯಾ, ಕೆನಡಾ ಹಾಗೂ ಹಾಂಕಾಂಗ್ ಸ್ಪರ್ಧಿಸುತ್ತಿದೆ. 2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಏಕದಿನ ಪಂದದ್ಯ ಆಡಿದ್ದ ಅಮೆರಿಕಾ, ಹಾಂಕಾಂಗ್  ವಿರುದ್ಧ ಸೋಲು ಕಂಡಿತ್ತು.