Asianet Suvarna News Asianet Suvarna News

ವಿಶ್ವ ಸ್ನೂಕರ್‌ ತಂಡ ಕೂಟ: ಪಂಕಜ್‌ಗೆ 23ನೇ ವಿಶ್ವ ಕಿರೀ​ಟ!

ವಿಶ್ವ ಸ್ನೂಕರ್‌ ತಂಡದ ವಿಭಾಗದಲ್ಲಿ ಪಂಕಜ್‌ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Pankaj Advani Aditya Mehta pair wins World Team Snooker title in Mandalay
Author
Mandalay, First Published Sep 26, 2019, 2:20 PM IST

ಮಾಂಡಲೇ(ಸೆ.26): ಭಾರತದ ತಾರಾ ಸ್ನೂಕರ್‌ ಪಟು ಪಂಕಜ್‌ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಜೋಡಿ, ಬುಧವಾರ ಮುಕ್ತಾಯವಾದ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ತಂಡಗಳ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಪಂಕಜ್‌ 23ನೇ ವಿಶ್ವ ಕಿರೀಟ ಗೆದ್ದ ಸಾಧನೆ ಮಾಡಿ​ದ್ದಾರೆ.

ಪಂಕಜ್‌ ಅಡ್ವಾ​ಣಿಗೆ ಪ್ರಧಾನಿ ಮೋದಿ ಅಭಿನಂದನೆ...

ಈ ಪ್ರಶ​ಸ್ತಿ​ಯೊಂದಿಗೆ ಐಬಿ​ಎಸ್‌ಎಫ್‌ನ ಎಲ್ಲಾ ವಿಭಾಗಗಳಲ್ಲೂ ವಿಶ್ವ ಚಾಂಪಿ​ಯನ್‌ ಆದ ಸಾಧನೆಯನ್ನು ಪಂಕಜ್‌ ಮಾಡಿ​ದ್ದಾರೆ. ಕಳೆದ ವಾರವಷ್ಟೇ ಅವರು ವಿಶ್ವ ಬಿಲಿ​ಯರ್ಡ್ಸ್ ಚಾಂಪಿ​ಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿ​ದ್ದರು.

ವಿಶ್ವ ಬಿಲಿಯರ್ಡ್ಸ್ ಚಾಂಪಿ​ಯನ್‌ಶಿಪ್‌: ಪಂಕಜ್‌ಗೆ 22ನೇ ವಿಶ್ವ ಕಿರೀಟ!

ರೋಚ​ಕತೆಯಿಂದ ಕೂಡಿದ್ದ ಫೈನಲ್‌ ಪಂದ್ಯ​ದಲ್ಲಿ ಭಾರತ 1 ತಂಡ, ಥಾಯ್ಲೆಂಡ್‌ 2 ತಂಡದ ವಿರುದ್ಧ 5-2 ಫ್ರೇಮ್‌ಗಳ​ಲ್ಲಿ (65-31, 9-69, 74-8, 21-64, 55-44, 72-23, 83-9) ಜಯ ಗಳಿ​ಸಿತು. ಅಕ್ಟೋ​ಬರ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ಯ​ಲಿ​ರುವ ವಿಶ್ವ ಬಿಲಿ​ಯರ್ಡ್ಸ್ ಚಾಂಪಿ​ಯನ್‌ಶಿಪ್‌ನಲ್ಲಿ ಅಡ್ವಾಣಿ ಪಾಲ್ಗೊ​ಳ್ಳ​ಲಿ​ದ್ದಾರೆ.
 

Follow Us:
Download App:
  • android
  • ios