ಪಾಕಿಸ್ತಾನಕ್ಕೆ 2019ರ ವಿಶ್ವಕಪ್ ಆಡಲು ಅವಕಾಶವಿಲ್ಲ. ಹೌದು 1992ರಲ್ಲಿ ಚಾಂಪಿಯನ್'​ಗಳಾಗಿದ್ದ ಪಾಕಿಸ್ತಾನ 2019ರ ವಿಶ್ವಕಪ್​ ಮರಿಚಿಕೆಯಾಗಿದೆ. ಅಷ್ಟಕ್ಕೂ ಪಾಕಿಸ್ತಾನ ವಿಶ್ವಕಪ್​'ನಲ್ಲಿ ಆಡಲು ಅಡೆತಡೆಗಳಾದ್ರು ಏನು.? ಅವರನ್ನ ಕ್ರಿಕೆಟ್​​ನ ಮಹತ್ತರ ಟೂರ್ನಿಯಲ್ಲಿ ಭಾಗವಹಿಸದಂತೆ ಮಾಡುತ್ತಿರುವವರು ಯಾರು.? ಇಲ್ಲಿದೆ ವಿವರ

ಪಾಕಿಸ್ತಾನಕ್ಕೆ 2019ರ ವಿಶ್ವಕಪ್ ಆಡಲು ಅವಕಾಶವಿಲ್ಲ. ಹೌದು 1992ರಲ್ಲಿ ಚಾಂಪಿಯನ್'​ಗಳಾಗಿದ್ದ ಪಾಕಿಸ್ತಾನ 2019ರ ವಿಶ್ವಕಪ್​ ಮರಿಚಿಕೆಯಾಗಿದೆ. ಅಷ್ಟಕ್ಕೂ ಪಾಕಿಸ್ತಾನ ವಿಶ್ವಕಪ್​'ನಲ್ಲಿ ಆಡಲು ಅಡೆತಡೆಗಳಾದ್ರು ಏನು.? ಅವರನ್ನ ಕ್ರಿಕೆಟ್​​ನ ಮಹತ್ತರ ಟೂರ್ನಿಯಲ್ಲಿ ಭಾಗವಹಿಸದಂತೆ ಮಾಡುತ್ತಿರುವವರು ಯಾರು.? ಇಲ್ಲಿದೆ ವಿವರ

2019ರಲ್ಲಿ ಇಂಗ್ಲೆಂಡ್​​'ನಲ್ಲಿ ನಡೆಯುವ ವಿಶ್ವಕಪ್​ ಕ್ರಿಕೆಟ್'​​ಗೆ ಈಗಾಗಲೇ ಎಲ್ಲಾ ದೇಶಗಳು ತಯಾರಿಯನ್ನು ಆರಂಭಿಸಿವೆ. ಕ್ರಿಕೆಟ್​​'ನ ಮಹತ್ತರ ಟೂರ್ನಿಗಾಗಿ ಮಾಸ್ಟರ್​​ ಪ್ಲಾನ್​'ಗಳನ್ನ ಹಾಕಿಕೊಳ್ಳುತ್ತಿವೆ. ಆದರೆ ನೆರೆ ರಾಷ್ಟ್ರ ಪಾಕಿಸ್ತಾನ ಮಾತ್ರ 2019ರ ವಿಶ್ವಕಪ್​​ ಆಡುತ್ತೇವೋ ಇಲ್ಲವೋ ಎಂಬ ಚಿಂತೆಯಲ್ಲಿದೆ.

ಐಸಿಸಿ ಹೊಸ ಚಿಂತನೆಗೆ ಪಾಕ್​ ತಂಡ ಬಲಿ?

ಪಾಕ್'​​​ಗೆ 2019ರ ವಿಶ್ವಕಪ್​​ ಮರಿಚಿಕೆಯಾಗುವಂತೆ ಮಾಡಿದ್ದು ಐಸಿಸಿ. ಹೌದು ಸದ್ಯ ಐಸಿಸಿ 2019ರ ವಿಶ್ವಕಪ್​​​ ತಯಾರಿಯಲ್ಲಿದೆ. ಅದಕ್ಕಾಗಿ ವಿಶೇಷ ನಿಯಮಗಳನ್ನ ತರಲು ಚಿಂತನೆ ನಡೆಸಿದೆ. ಐಸಿಸಿಯ ಒಂದು ನಿಯಮವೇನಾದರೂ ಚಾಲ್ತಿಗೆ ಬಂದರೆ ಪಾಕ್​​ ಈ ಬಾರಿ ವಿಶ್ವಕಪ್​​ ಪಟ್ಟಿಯಿಂದ ಹೊರಬೀಳುವುದು ಗ್ಯಾರೆಂಟಿ.

ಐಸಿಸಿ 2019ರ ವಿಶ್ವಕಪ್'ಗೆ ಕೇವಲ 10 ರಾಷ್ಟ್ರಗಳಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಅದರಲ್ಲೂ ಐಸಿಸಿ ಱಂಕಿಂಗ್​ ಪಟ್ಟಿಯಲ್ಲಿರುವ ಮೊದಲ 7 ರಾಷ್ಟ್ರಗಳಿಗೆ ಮಾತ್ರ 2019ರ ವಿಶ್ವಕಪ್'​ಗೆ ನೇರವಾಗಿ ಆಯ್ಕೆಯಾಗುತ್ತವೆ. ಇನ್ನುಳಿದ 3 ಸ್ಥಾನಗಳಿಗೆ ಅಸೋಸಿಯೇಟ್​​​​ ರಾಷ್ಟ್ರಗಳು ಕಾದಾಡಬೇಕು.

ಬಾಂಗ್ಲಾ ಇನ್​​... ಪಾಕ್​ ಔಟ್​​​

ಐಸಿಸಿ ಏನಾದರೂ ಈ ಯೋಜನೆಯನ್ನು ಪ್ರಕಟಿಸಿದ್ದೇ ಆದರೆ ಪಾಕ್​'ಗೆ ಕುತ್ತು ಖಚಿತ. ಸದ್ಯ ಪಾಕಿಸ್ತಾನ ಐಸಿಸಿ ಱಂಕಿಂಗ್​'ನಲ್ಲಿ 8ನೇ ಸ್ಥಾನದಲ್ಲಿದೆ. ಬಾಂಗ್ಲಾ 7ನೇ ಸ್ಥಾನದಲ್ಲಿದೆ. ಐಸಿಸಿ ನಿಯಮ ಪ್ರಕಾರ ಪಾಕ್​​ 2019ರ ವಿಶ್ವಕಪ್​​ ಆಡಬೇಕಾದರೆ ಅಸೋಸಿಯೇಟ್​​​​ ರಾಷ್ಟ್ರಗಳೊಂದಿಗೆ ಕಾದಾಡಬೇಕಿದೆ.

ಭಾರತದ ಕ್ರಿಕೆಟ್​​ ಪ್ರಿಯರಿಗೂ ಶಾಕ್​​..!

ಒಂದು ವೇಳೆ ಪಾಕಿಸ್ಥಾನಕ್ಕೆ ಈ ಸ್ಥಿತಿ ಬಂದಾದಲ್ಲಿ ಪಾಕಿಸ್ತಾನದ ಕ್ರಿಕೆಟ್​​ ಪ್ರಿಯರಿಗೆ ಮಾತ್ರವಲ್ಲ ಭಾರತದ ಅಭಿಮಾನಿಗಳಿಗೂ ನಿರಾಸೆಯಾಗಲಿದೆ. ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಮುಖಿಯಾಗುತ್ತಿರುವುದು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ. ಸದ್ಯ ಚಾಂಪಿಯನ್ಸ್​​ ಟ್ರೋಫಿ ಬಿಟ್ಟರೆ ಇನ್ನೆರಡು ವರ್ಷಗಳಲ್ಲಿ ಇನ್ಯಾವ ಐಸಿಸಿ ಟೂರ್ನಿಗಳಿಲ್ಲ. ಹೀಗಾಗಿ ಇವೆರಡೂ ತಂಡಗಳು ಕಾದಾಡೋದನ್ನ ನೋಡಲು ಹಲವು ವರ್ಷಗಳೇ ಕಾಯಬೇಕಾಗುತ್ತದೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಚಾಂಪಿಯನ್'​ಗಳಂತೆ ಮೆರೆದಿದ್ದ ತಂಡಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು. ಆದದ್ರೆ ಕ್ರಿಕೆಟ್'​​ನ ದೊಡ್ಡಣ್ಣನ ನಿಯಮಕ್ಕೆ ತಲೆಬಾಗಲೇಬೇಕು. ಆದರೆ ಐಸಿಸಿ ಈ ಚಿಂತನೆಯನ್ನು ಜಾರಿಗೆ ತರದೆ ಇರಲಿ ಭಾರತ-ಪಾಕ್ ಪಂದ್ಯವನ್ನು ನೋಡುವಂತಾಗಲಿ ಎಂಬುವುದೇ ಎಲ್ಲರ ಆಶಯ.