ಇಸ್ಲಾಮಾಬಾದ್[ಏ.21]: ಪಾಕಿಸ್ತಾನದ ಮಣಿಕಟ್ಟು ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ವೈರಸ್ ಜ್ವರದಿಂದ ಬಳಲುತ್ತಿದ್ದು, ಮುಂಬರುವ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದಿದ್ದಾರೆ. ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಶಾದಾಬ್ ಖಾನ್ ಕ್ರಿಕೆಟ್ ಮಹಾಸಂಗ್ರಾಮದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ- ಮಾರಕ ವೇಗಿಗಿಲ್ಲ ಸ್ಥಾನ!

ಶಾದಾಬ್’ಗೆ ಕನಿಷ್ಠ 4 ವಾರಗಳ ವಿಶ್ರಾಂತಿ ಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶ್ವಕಪ್’ಗೆ ಇನ್ನೂ ಐದಾರು ವಾರಗಳಿರುವುದರಿಂದ ವಿಶ್ವಕಪ್ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.

ಪಾಕ್‌ ಆಟಗಾರರ ಜತೆ ಪತ್ನಿಯರ ಪ್ರಯಾಣವಿಲ್ಲ!

ಪಾಕಿಸ್ತಾನ ತಂಡದಲ್ಲಿ ಮೀಸಲು ಆಟಗಾರರಾಗಿ ಮೊಹಮ್ಮದ್ ಅಮೀರ್ ಮತ್ತು ಆಸಿಫ್ ಅಲಿ ಸ್ಥಾನ ಪಡೆದಿದ್ದಾರೆ. ಒಂದುವೇಳೆ ಇಂಗ್ಲೆಂಡ್ ಸರಣಿ ಅಂತ್ಯದ ವೇಳೆಗೂ ಶಾದಾಬ್ ಖಾನ್ ಗುಣಮುಖರಾಗದಿದ್ದರೆ ಈ ಇಬ್ಬರಲ್ಲಿ ಒಬ್ಬರಿಗೆ ತಂಡದಲ್ಲಿ ಅವಕಾಶ ಸಿಗಬಹುದು. ಪಾಕಿಸ್ತಾನ ತಂಡವು ಮೇನಲ್ಲಿ ಇಂಗ್ಲೆಂಡ್ ವಿರುದ್ದ 5 ಏಕದಿನ ಹಾಗೂ 1 ಟಿ20 ಪಂದ್ಯವನ್ನಾಡಲಿದೆ. ಪಾಕಿಸ್ತಾನ ತಂಡವು ಮೇ.31ರಂದು ಟ್ರೆಂಟ್ ಬ್ರಿಡ್ಜ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್ 2019: ರಾಯುಡು, ಪಂತ್’ಗೆ ಗುಡ್’ನ್ಯೂಸ್..!