ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಜಯಿಸಿ ಸಂಭ್ರಮಿಸಿದೆ.ಅದರಲ್ಲೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ದಾಖಲೆಯ ಮೂರನೇ ಶತಕ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೆಂಗಳೂರು[ಜು.09]: ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಜಯಿಸಿ ಸಂಭ್ರಮಿಸಿದೆ.
ಅದರಲ್ಲೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ದಾಖಲೆಯ ಮೂರನೇ ಶತಕ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೋಹಿತ್ ಸಮಯೋಚಿತ ಬ್ಯಾಟಿಂಗ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂಧನೆಗಳ ಮಹಾಪೂರವೇ ಹರಿದು ಬಂದಿದೆ. ಇನ್ನು ಇದರ ಜತೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಶೋಯೆಬ್ ಅಖ್ತರ್ ಹಾಗೂ ರಮೀಜ್ ರಾಜಾ ಕೂಡಾ ರೋಹಿತ್ ಬ್ಯಾಟಿಂಗ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇದನ್ನು ಓದಿ:ಪಾಕ್ ಗುಣಗಾನ ಮಾಡಿದ ಕೈಫ್: ಟ್ವಿಟರಿಗರಿಂದ ಕ್ರಿಕೆಟಿಗನಿಗೆ ದೇಶಪ್ರೇಮದ ಪಾಠ
ರಮೀಜ್ ರಾಜಾ, ಗಾಡ್ ಗಿಫ್ಟ್ ಟು ಬ್ಯಾಟಿಂಗ್[ ರೋಹಿತ್ ಬ್ಯಾಟಿಂಗ್’ಗೆ ದೇವರು ನೀಡಿದ ಕೊಡುಗೆ] ಎಂದು ಕೊಂಡಾಡಿದ್ದರೆ, ಅಖ್ತರ್ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು ಮಣಿಸಿದೆ, ಹಿಂದುಸ್ಥಾನವೀಗ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಉಪಖಂಡದ ತಂಡಗಳೆರಡು ಚುಟುಕು ಕ್ರಿಕೆಟ್’ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿವೆ. ಅದರಲ್ಲೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಮೂರು ಶತಕ ಸಿಡಿಸಿದ ರೋಹಿತ್ ಶರ್ಮಾ ಬ್ಯಾಟಿಂಗ್ ಅತ್ಯದ್ಭುತವಾಗಿತ್ತು ಎಂದು ಹಿಟ್’ಮ್ಯಾನ್ ರೋಹಿತ್ ಗುಣಗಾನ ಮಾಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪಾಕಿಸ್ತಾನ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದನ್ನು ಖಂಡಿಸಿ ಕೆಲ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಪ್ರತಿಕ್ರಿಯೆ ಪಾಕಿಸ್ತಾನದಲ್ಲೂ ವ್ಯಕ್ತವಾಗಿದೆ.
