ಬೆಂಗಳೂರು[ಜು.08]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸದ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದು, ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ. ರೋಹಿತ್ ಶರ್ಮಾ ಸ್ಫೋಟಕ ಅಜೇಯ ಶತಕ, ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ಸ್ಮರಣೀಯ ಜಯ ದಾಖಲಿಸಿದೆ. 

ಟೀಂ ಇಂಡಿಯಾದ ಈ ಸಾಂಘಿಕ ಪ್ರದರ್ಶನವನ್ನು ಟ್ವಿಟರಿಗರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಸೆಹ್ವಾಗ್’ರಿಂದ ಹಿಡಿದು ಲಕ್ಷ್ಮಣ್’ವರೆಗೆ ಕ್ರಿಕೆಟ್ ದಿಗ್ಗಜರೂ ಕೂಡಾ ವಿರಾಟ್ ಪಡೆಯ ಸಾಧನೆಯನ್ನು ಕೊಂಡಾಡಿದ್ದಾರೆ.

ಟೀಂ ಇಂಡಿಯಾ ಟಿ20 ಸರಣಿ ಗೆಲುವಿಗೆ ಟ್ವಿಟರ್’ನಲ್ಲಿ ಹರಿದುಬಂದ ಶ್ಲಾಘನೆಯ ಮಹಾಪೂರವಿದು...