ಲಾಹೋರ್‌[ಸೆ.07]: ಪಾಕಿ​ಸ್ತಾ​ನದ ಲೆಗ್‌ ಸ್ಪಿನ್‌ ಮಾಂತ್ರಿಕ, ದಿಗ್ಗಜ ಕ್ರಿಕೆ​ಟಿಗ ಅಬ್ದುಲ್‌ ಖಾದಿರ್‌ ಶುಕ್ರ​ವಾರ ಹೃದ​ಯಾ​ಘಾತದಿಂದ ನಿಧ​ನ​ರಾ​ದರು. ಅವ​ರಿಗೆ 63 ವರ್ಷ ವಯ​ಸ್ಸಾ​ಗಿತ್ತು. 

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ಪಾಕ್‌ ಪರ 67 ಟೆಸ್ಟ್‌ ಹಾಗೂ 104 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿದ್ದ ಅಬ್ದುಲ್‌, ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 368 ವಿಕೆಟ್‌ಗಳನ್ನು ಕಬ​ಳಿ​ಸಿ​ದ್ದರು. 2009ರಲ್ಲಿ ಖಾದಿರ್‌ ಪಾಕಿ​ಸ್ತಾನ ತಂಡದ ಆಯ್ಕೆಗಾರ​ರಾ​ಗಿ​ದ್ದರು. ಅವರು ಆಯ್ಕೆ ಮಾಡಿದ್ದ ತಂಡ, 2009ರ ಟಿ20 ವಿಶ್ವ​ಕಪ್‌ ಗೆದ್ದಿತ್ತು. 

ಅಬ್ದುಲ್‌ ಖಾದಿರ್‌ ನಿಧನಕ್ಕೆ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆ​ಟಿ​ಗರು ಕಂಬನಿ ಮಿಡಿ​ದಿ​ದ್ದಾರೆ.