Asianet Suvarna News Asianet Suvarna News

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹಾಗೂ ಆಯ್ಕೆಗಾರರನ್ನಾಗಿ ಮಾಜಿ ನಾಯಕ ಮಿಸ್ಬಾ ಉಲ್ ಹಕ್‌ಗೆ ಪಟ್ಟ ಕಟ್ಟಲಾಗಿದೆ. ಇನ್ನು ಮಿಸ್ಬಾ ನಾಯಕರಾಗಿದ್ದಾಗ ತಂಡದ ಕೋಚ್ ಆಗಿದ್ದ ವಖಾರ್ ಯೂನಿಸ್‌ಗೆ ಬೌಲಿಂಗ್ ಕೋಚ್ ಹುದ್ದೆ ನೀಡಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Former Cricketer Misbah ul Haq appointed Pakistan coach and chief selector
Author
Lahore, First Published Sep 5, 2019, 10:11 AM IST

ಲಾಹೋರ್‌[ಸೆ.05]: ಮಾಜಿ ನಾಯಕ ಮಿಸ್ಬಾ ಉಲ್‌ ಹಕ್‌, ಪಾಕಿಸ್ತಾನ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹಾಗೂ ಆಯ್ಕೆಗಾರರನ್ನಾಗಿ ನೇಮಕಗೊಂಡಿದ್ದಾರೆ. ಅಚ್ಚ​ರಿ ಎಂದರೆ ಮಿಸ್ಬಾ ತಂಡದ ನಾಯ​ಕ​ರಾ​ಗಿ​ದ್ದಾಗ ಕೋಚ್‌ ಆಗಿದ್ದ ಮಾಜಿ ವೇಗಿ, ವಖಾರ್‌ ಯೂನಿಸ್‌ ಬೌಲಿಂಗ್‌ ಕೋಚ್‌ ಆಗಿ ನೇಮ​ಕ​ಗೊಂಡಿ​ದ್ದಾರೆ. 

ಪಾಕಿ​ಸ್ತಾನ ಕ್ರಿಕೆಟ್‌ ತಂಡ​ಕ್ಕೆ ಮಿಸ್ಬಾ ಉಲ್‌ ಹಕ್‌ ಕೋಚ್‌?

ಮಿಸ್ಬಾ ಅಡಿ​ಯಲ್ಲಿ ವಖಾರ್‌ ಕಾರ್ಯ​ನಿ​ರ್ವ​ಹಿ​ಸ​ಲಿದ್ದು, ಕ್ರಿಕೆಟ್‌ ವಲ​ಯ​ದಲ್ಲಿ ಭಾರೀ ಕುತೂ​ಹಲ ಮೂಡಿ​ಸಿದೆ. ಇಬ್ಬ​ರಿಗೂ 3 ವರ್ಷಗಳ ಗುತ್ತಿಗೆ ನೀಡ​ಲಾ​ಗಿದೆ. ಏಕದಿನ ವಿಶ್ವ​ಕಪ್‌ನಲ್ಲಿ ತಂಡ ಕಳಪೆ ಪ್ರದ​ರ್ಶನ ತೋರಿದ ಕಾರಣ, ಪಾಕಿ​ಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಕೋಚಿಂಗ್‌ ಸಿಬ್ಬಂದಿ​ಯನ್ನು ವಜಾ​ಗೊ​ಳಿ​ಸಿತ್ತು. ಇನ್ನು ಆಯ್ಕೆಗೂ ಮುನ್ನ ಮಾಜಿ ಕ್ರಿಕೆಟಿಗರು ಮಿಸ್ಬಾ ಅವರನ್ನು ಕೋಚ್ ಆಗಿ ನೇಮಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು. 

ಪಾಕ್ ತಂಡಕ್ಕೆ ಮಿಸ್ಬಾ ಡಿಫೆನ್ಸ್ ಬೇಡ; ಕೊಹ್ಲಿ ನಿರ್ಭೀತತೆ ಬೇಕು: ರಮೀಝ್ ರಾಜ!

ಇಂಗ್ಲೆಂಡ್’ನಲ್ಲಿ ನಡೆದ 2019ರ ಏಕದಿನ ವಿಶ್ವಕಪ್ ವೇಳೆ ಪಾಕಿಸ್ತಾನ ತಂಡ ಸಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಪಾಕ್ ಕೋಚ್ ಮಿಕಿ ಅರ್ಥರ್ ಅವರ ತಲೆದಂಡವಾಗಿತ್ತು. ಇನ್ನು ಪಾಕಿಸ್ತಾನ ಪರ 75 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನಾಡಿರುವ ಮಿಸ್ಬಾ ಒಟ್ಟು 10,300ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರ ಜತೆಗೆ 56 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಅನುಭವವೂ ಇದೆ.

ನಾನು ಮತ್ತೊಮ್ಮೆ ಅನುಭವಿ ವಖಾರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದಾನೆ. ನನ್ನನ್ನು ಕೋಚ್ ಆಗಿ ನೇಮಕ ಮಾಡಿದ್ದಕ್ಕೆ ಪಾಕ್ ಕ್ರಿಕೆಟ್ ಮಂಡಳಿಗೆ ಆಭಾರಿಯಾಗಿದ್ದೇನೆ. ಉತ್ತಮ ತಂಡ ಕಟ್ಟಲು ಶ್ರಮಿಸುತ್ತೇನೆ ಎಂದು ಮಿಸ್ಬಾ ಹೇಳಿದ್ದಾರೆ.   
 

Follow Us:
Download App:
  • android
  • ios