ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಪ್ರಚಾರಕ್ಕಾಗಿ ಕ್ರಿಕೆಟಿಗರು ವಿಡಿಯೋ ಹರಿಬಿಟ್ಟಿದ್ದಾರೆ. ಆದರೆ ಈ ವಿಡಿಯೋ ಮೂಲಕ ಪಾಕಿಸ್ತಾನಿ ಅಭಿಮಾನಿಗಳು ಭಾರತದ ಪೈಲೆಟ್ ಅಭಿನಂದನ್ ಟ್ರೋಲ್ ಮಾಡಿದ್ದಾರೆ.  

ಕರಾಚಿ(ಸೆ.27): ಪಾಕಿಸ್ತಾನ ತನ್ನ ನೆಲದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಲು 10 ವರ್ಷ ತೆಗೆದುಕೊಂಡಿದೆ. ಆದರೆ ಶ್ರೀಲಂಕಾ ಹೊರತು ಪಡಿಸಿದರೆ ಇನ್ಯಾವ ತಂಡ ಕೂಡ ಪಾಕಿಸ್ತಾನ ಪ್ರವಾಸಕ್ಕೆ ಮುಂದೆ ಬಂದಿಲ್ಲ. ಇಷ್ಟಾದರೂ ಪಾಕಿಸ್ತಾನ ಅಭಿಮಾನಿಗಳಲ್ಲಿ ತಾವು ವಿಶ್ವದ ಅತ್ಯುತ್ತಮ ಹಾಗೂ ಶಾಂತಿ ಪ್ರೀಯ ರಾಷ್ಟ ಅನ್ನೋ ಭಾವನೆ ಇದೆ. ಇಷ್ಟೇ ಅಲ್ಲ ಟ್ರೋಲ್ ಮೂಲಕವೇ ವಿಶ್ವ ಆಳುತ್ತೇವೆ ಅನ್ನೋ ಭ್ರಮೆ ಕಡಿಮೆಯಾಗಿಲ್ಲ. ಇದೀಗ ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟಿಗರು ಟಿ ಟಾಲೆಂಜ್ ವಿಡಿಯೋ ಮಾಡಿದ್ದಾರೆ. ಆದರೆ ಪಾಕಿಸ್ತಾನ ಅಭಿಮಾನಿಗಳು ಭಾರತದ IAF ಪೈಲೆಟ್ ಅಭಿನಂದನ್ ವರ್ಧಮಾನ್‌ನ್ನು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: 10 ವರ್ಷಗಳ ಬಳಿಕ ಟೂರ್ನಿ ಆಯೋಜಿಸಿದ ಪಾಕ್‌ಗೆ ಶಾಕ್: PAKvSL ಪಂದ್ಯ ರದ್ದು!

ಪಾಕಿಸ್ತಾನ ಪ್ರವಾಸ ಮಾಡಿರುವ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ. ನಮ್ಮ ಪ್ರದರ್ಶನ ಪಾಕ್ ಚಹಾ ರೀತಿಯಲ್ಲಿ ಉತ್ತಮವಾಗರಲಿದೆ ಎಂದು ಶ್ರೀಲಂಕಾ ನಾಯಕ ಲಹೀರು ತಿರಿಮನ್ನೆ ಹೇಳಿದ್ದಾರೆ. ಈ ಚಾಲೆಂಜ್ ಸ್ವೀಕರಿಸಿದ ಪಾಕಿಸ್ತಾನ ವೇಗಿ ವಹಾಬ್ ರಿಯಾಜ್, ಮೈದಾನದಲ್ಲಿ ಮುಖಾಮುಖಿಯಾಗೋಣ, ಟಿ ಚೆನ್ನಾಗಿದೆ ಜೊತೆಗೆ ಬಿಸ್ಕರ್ ಇರಬೇಕು ಎಂದಿದ್ದಾರೆ. \

Scroll to load tweet…

Scroll to load tweet…

ಇದನ್ನೂ ಓದಿ: ಕಾಶ್ಮೀರಕ್ಕಾಗಿ ಸೇನಾ ಕ್ಯಾಪ್ ಧರಿಸಿಸುತ್ತಾ ಪಾಕ್ ತಂಡ? ಕೋಚ್ ಮಿಸ್ಬಾ ನೀಡಿದ್ರು ಉತ್ತರ!

ಈ ವೀಡಿಯೋ ಮೂಲಕ ಭಾರತದ ಪೈಲೆಟ್ ಅಭಿನಂದನ್ ವರ್ಧಮಾನ್‌ಗೆ ಟಾಂಗ್ ನೀಡಲಾಗಿದೆ ಎಂದು ಪಾಕಿಸ್ತಾನ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಲಹೀರು ತಿರಿಮನ್ನೆ ಹಾಗೂ ವಹಾಬ್ ರಿಯಾಜ್ ವಿಡಿಯೋ ಮೂಲಕ ಭಾರತಕ್ಕೆ ಸರಿಯಾದ ತಿರುಗೇಟು ನೀಡಿದ್ದಾರೆ ಎಂದು ಪಾಕಿಸ್ತಾನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

2019ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಯಿಂದ ಭಾರತ ಬಾಲಾಕೋಟ್ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಬಳಿಕ ಉಭಯ ದೇಶಗಳ ನಡುವೆ ಗಡಿ ರೇಖೆಯಲ್ಲಿ ಯುದ್ದವೇ ನಿರ್ಮಾಣವಾಗಿತ್ತು. ಭಾರತದ ಮೇಲೆ ದಾಳಿ ಮಾಡಲು ಬಂದು ಪಾಕ್ ವಿಮಾನ ಹಿಮ್ಮೆಟ್ಟಿಸುವ ವೇಳೆ ಭಾರತದ ಮಿಗ್-21 ಪತನವಾಗಿತ್ತು. ಪೈಲೆಟ್ ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ಬಳಿಕ ವಿಡಿಯೋದಲ್ಲಿ ಅಭಿನಂದನ್, ತಾನು ಪಾಕಿಸ್ತಾನ ಸೇನಾ ವಶದಲ್ಲಿದ್ದು, ಸುರಕ್ಷಿತವಾಗಿದ್ದೇನೆ. ಚಹಾ ಕುಡಿಯುತ್ತಿದ್ದೇನೆ. ಚಹಾ ಉತ್ತಮವಾಗಿದೆ ಎಂದಿದ್ದರು. 

ಇದನ್ನೂ ಓದಿ: ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!
ಪಾಕಿಸ್ತಾನಿಯರು ಅಭಿನಂದನ್ ಸೆರೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರತವನ್ನು ಕುಟುಕಿದ್ದರು. ಬಳಿಕ ವಿಶ್ವಕಪ್ ಟೂರ್ನಿ ವೇಳೆ ಇಂಡೋ-ಪಾಕ್ ಕ್ರಿಕೆಟ್ ಪಂದ್ಯಕ್ಕೂ ಅಭಿನಂದನ್ ಕುರಿತ ಜಾಹೀರಾತು ಮಾಡಿ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೆ ಅಭಿನಂದನ್ ಎಳೆದು ತಂದು ಆನಂದ ಪಡುತ್ತಿದ್ದಾರೆ.

ಇದನ್ನೂ ಓದಿ: ಪಾಕ್‌ ಅಭಿಮಾನಿಗೆ ಅಭಿನಂದನ್ ಮೀಸೆ: #UltimatePunch