ಲಾಹೋರ್(ಡಿ.14): 2020ರ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಲಿದೆ. ಆದರೆ ಟೂರ್ನಿ ಎಲ್ಲಿ ಆಯೋಜನೆ ಮಾಡಬೇಕು ಅನ್ನೋದು ಇನ್ನು ನಿರ್ಧಾರವಾಗಿಲ್ಲ.  ಪಾಕಿಸ್ತಾನ ಅಥವಾ ಯುಎಇನಲ್ಲಿ 2020ರ ಏಷ್ಯಾಕಪ್ ಟೂರ್ನಿ ಆಯೋಜನೆಯಾಗಲಿದೆ.

ಇದನ್ನೂ ಓದಿ: ಆರ್‌ಸಿಬಿ ತೊರೆದು ಐಪಿಎಲ್‌ನಿಂದ ಮರೆಯಾದ ನಾಲ್ವರು ಕ್ರಿಕೆಟಿಗರು!

ಭಾರತ ಹಾಗೂ ಪಾಕಿಸ್ತಾನ ಸಂಬಂಧ ಆಧರಿಸಿ ಟೂರ್ನಿ ಸ್ಥಳ ನಿರ್ಧರಿಸಲಾಗುತ್ತೆ. ಕಾರಣ ಸಧ್ಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ಪ್ರತಿಷ್ಠಿತ ಟೂರ್ನಿಯಿಂದ ಹೊರಬರುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಸೌರವ್ ಗಂಗೂಲಿ ನಾಯಕತ್ವ ಉಳಿಸಿತ್ತು ಲಕ್ಷ್ಮಣ್ 281 ರನ್!

2020ರ ವೇಳೆ ಇಂಡೋ-ಪಾಕ್ ಸಂಬಂಧ ಆಧರಿಸಿ ಸ್ಥಳ ನಿರ್ಧರಿಸಲಾಗುತ್ತೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ACC) ಅಧ್ಯಕ್ಷ ನಜ್ಮಲ್ ಹಸನ್ ಹೇಳಿದ್ದಾರೆ. ಕಳೆದ ಬಾರಿ ಏಷ್ಯಾಕಪ್ ಟೂರ್ನಿಯನ್ನ ಬಿಸಿಸಿಐ ಆಯೋಜಿಸಿತ್ತು. ಟೂರ್ನಿ ಯುಎಇನಲ್ಲಿ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಟೂರ್ನಿ ಆಯೋಜನೆ ಸಮಸ್ಯೆಯಾಗಲ್ಲ ಎಂದು ನಜ್ಮಲ್ ಹೇಳಿದ್ದಾರೆ.

ಇದನ್ನೂ ಓದಿ: ವಿ ಶಾಸ್ತ್ರಿ ಹಾಗೂ ಕೊಹ್ಲಿಗಾಗಿ ನಿಯಮ ಉಲ್ಲಂಘಿಸಿದ ಬಿಸಿಸಿಐ!