ಡರ್ಬನ್(ಜ.23): ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಅಸಭ್ಯ ಹೇಳಿಕೆಯಿಂದ ಅಮಾನತಾಗಿರುವ ಬೆನ್ನಲ್ಲೇ ಇದೀಗ ಪಾಕಿಸ್ತಾನ ಕ್ರಿಕೆಟಿಗ ನಿಂದನೀಯ ಹೇಳಿಕೆ ಭಾರಿ ವಿವಾದ ಹುಟ್ಟುಹಾಕಿದೆ. ಸೌತ್ಆಫ್ರಿಕಾ ವಿರುದ್ದದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್, ಸೌತ್ಆಫ್ರಿಕಾ ಕ್ರಿಕೆಟಿಗ ಆ್ಯಂಡಿಲ್ ಫೆಕುಲ್‌ವಾಯೊಗೆ ನಿಂದಿಸಿದ್ದಾರೆ.

ಇದನ್ನೂ ಓದಿ: ಬೇಷರತ್‌ ಕ್ಷಮೆಯಾಚಿಸಿದ ಹಾರ್ದಿಕ್‌ ಪಾಂಡ್ಯ, ರಾಹುಲ್‌

ಕ್ರಿಕೆಟಿಗ ಹಾಗೂ ಆತನ ತಾಯಿಯನ್ನ ನಿಂದಿಸಿರುವ ಸರ್ಫಾರಾಜ್ ಅಹಮ್ಮದ್ ಹೇಳಿಕೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಹೇ ಕಪ್ಪು ಹುಡುಗ, ನಿನ್ನ ತಾಯಿ ಎಲ್ಲಿ ಕುಳಿತಿದ್ದಾರೆ? ಎಲ್ಲಿ ಪ್ರಾರ್ಥನೆ ಮಾಡಲು ಹೇಳಿದ್ದಿ? ಎಂದು ಸರ್ಫರಾಜ್ ಹೇಳಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಅಬ್ಬರಕ್ಕೆ ಕಿವೀಸ್ ಧೂಳೀಪಟ-ಸರಣಿ ಶುಭಾರಂಭ

ಸರ್ಫರಾಜ್ ಹೇಳಿಕೆಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಫರಾಜ್ ಕೆಟ್ಟ ಹೇಳಿಕೆಗೆ ಇದೀಗ ಮುಳುವಾಗೋ ಸಾಧ್ಯತೆ ಇದೆ.