ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್ ತಂಡ ಪ್ರಕಟ

Paine named captain for England ODIs
Highlights

ಬಾಲ್ ಟ್ಯಾಂಪರಿಂಗ್ ಬಳಿಕ ಟೆಸ್ಟ್ ತಂಡಕ್ಕೆ ಟಿಮ್ ಫೈನೆ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಫೈನೆ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 

ಸಿಡ್ನಿ[ಮೇ.08]: ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್’ಗಳ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಏಕದಿನ ತಂಡವನ್ನು ಟಿಮ್ ಫೈನೆ ಮುನ್ನಡೆಸಲಿದ್ದರೆ, ಆ್ಯರೋನ್ ಫಿಂಚ್ ಟಿ20 ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ.

ಬಾಲ್ ಟ್ಯಾಂಪರಿಂಗ್ ಬಳಿಕ ಟೆಸ್ಟ್ ತಂಡಕ್ಕೆ ಟಿಮ್ ಫೈನೆ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಫೈನೆ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಉಪನಾಯಕರಾಗಿ ಆ್ಯರೋನ್ ಫಿಂಚ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಆಸೀಸ್ ಆರಂಭಿಕ ಆಟಗಾರ ಫಿಂಚ್ ಅವರಿಗೆ ಟಿ20 ತಂಡದ ನಾಯಕರನ್ನಾಗಿ ಪಟ್ಟಕಟ್ಟಲಾಗಿದೆ.

ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಗೆ 15 ಆಟಗಾರ ತಂಡ ಪ್ರಕಟಿಸಲಾಗಿದೆ. ಇನ್ನು ಟಿ20 ಸರಣಿಗೆ 14 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾ ತಂಡವು ಸ್ಟಾರ್ ಆಟಗಾರರಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಮಾರ್ಶ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಆಸ್ಟ್ರೇಲಿಯಾ ಏಕದಿನ ತಂಡ: ಟಿಮ್ ಫೈನೆ[ನಾಯಕ] ಆ್ಯರೋನ್ ಫಿಂಚ್, ಆಸ್ಟನ್ ಅಗರ್, ಟ್ರಿವೀಸ್ ಹೆಡ್, ನಿಕ್ ಮ್ಯಾಡಿಸ್ಸನ್, ಗ್ಲೇನ್ ಮ್ಯಾಕ್ಸ್’ವೆಲ್. ಜೋಯ್ ರಿಚರ್ಡ್’ಸನ್, ಕೇನ್ ರಿಚರ್ಡ್’ಸನ್, ಡೋರ್ಶಿ ಶಾರ್ಟ್, ಬಿಲ್ಲಿ ಸ್ಟ್ಯಾನ್’ಲೇಕ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ವಾಪ್’ಸೇನ್, ಆ್ಯಂಡ್ರೋ ಟೈ

ಆಸ್ಟ್ರೇಲಿಯಾ ಟಿ20 ತಂಡ: ಆ್ಯರೋನ್ ಫಿಂಚ್[ನಾಯಕ], ಅಲೆಕ್ಸ್ ಕ್ಯಾರಿ, ಆಸ್ಟನ್ ಅಗರ್, ಟ್ರಿವೀಸ್ ಹೆಡ್, ನಿಕ್ ಮ್ಯಾಡಿಸ್ಸನ್, ಗ್ಲೇನ್ ಮ್ಯಾಕ್ಸ್’ವೆಲ್, ಜೋಯ್ ರಿಚರ್ಡ್’ಸನ್, ಕೇನ್ ರಿಚರ್ಡ್’ಸನ್, ಡೋರ್ಶಿ ಶಾರ್ಟ್, ಬಿಲ್ಲಿ ಸ್ಟ್ಯಾನ್’ಲೇಕ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ವಾಪ್’ಸೇನ್, ಆ್ಯಂಡ್ರೋ ಟೈ, ಜ್ಯಾಕ್ ವೈಲ್ಡರ್’ಮೌತ್. 

loader