ನವದೆಹಲಿ(ಮಾ.14): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಟಗಾರರ ಆಯ್ಕೆ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದು ಸ್ಥಾನಕ್ಕೆ ಮಾತ್ರ ಯಾರ ಹೆಸರು ಅಂತಿಮಗೊಂಡಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಡಿಸಿದ್ದಾರೆ. ಈ ಮೂಲಕ ಆಸಿಸ್ ವಿರುದ್ದದ ಸರಣಿಗೆ ಆಯ್ಕೆಯಾದ ತಂಡವೇ ವಿಶ್ವಕಪ್ ಟೂರ್ನಿಗೂ ತೆರಳಲಿದೆ ಅನ್ನೋ ಸೂಚನೆಯನ್ನು ಕೊಹ್ಲಿ ನೀಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಪ್ರಕಟಿಸಿದ VVS ಲಕ್ಷ್ಮಣ್!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ವಿಶ್ವಕಪ್ ತಂಡಕ್ಕೆ ಬಹುತೇಕ ಆಟಗಾರರ ಹೆಸರು ಅಂತಿಮಗೊಂಡಿದೆ. ಇನ್ನೊಂದು ಸ್ಥಾನದ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ಈ ಮೂಲಕ 4ನೇ ಸ್ಥಾನಕ್ಕೆ ಯಾರು ಅನ್ನೋದು ಇನ್ನು ಅಂತಿಮಗೊಂಡಿಲ್ಲ ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಟೂರ್ನಿಯಲ್ಲಿ ಈತ ಟೀಂ ಇಂಡಿಯಾ ಪರ ಆಡಲಿ: ಇದು ಟ್ವಿಟರಿಗರ ಆಗ್ರಹ

ಆಸ್ಟ್ರೇಲಿಯಾ ವಿರುದ್ಧದ ಅಂತಿಮ 3 ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರ  ಸಾಮರ್ಥ್ಯ ಪರೀಕ್ಷೆ ಮಾಡಿದೆ. ಹೀಗಾಗಿ ವಿಶ್ವಕಪ್ ತಂಡದ ಆಯ್ಕೆಯಲ್ಲಿ ಹೆಚ್ಚು ಗೊಂದಲವಿಲ್ಲ ಎಂದಿದ್ದಾರೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಮಹತ್ವದ ಟೂರ್ನಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.