ತಿರುವನಂತಪುರಂ(ಜ.23): ಇಂಗ್ಲೆಂಡ್ ಲಯನ್ಸ್ ವಿರುದ್ಧದ  ಮೊದಲ ಏಕದಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಇಂಡಿಯಾ ಎ ತಂಡ ಗೆಲುವು ಸಾಧಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡ 1-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಗೆಲುವಿನ ಬಳಿಕ ಧೋನಿ-ಕೊಹ್ಲಿ ಕ್ರೀಡಾಂಗಣದಲ್ಲಿ ಮಕ್ಕಳಾಟ-ವಿಡಿಯೋ ವೈರಲ್!

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡ ಅದ್ಬುತ ಪ್ರದರ್ಶನ ನೀಡಿತು. ಸ್ಯಾಮ್ ಬಿಲ್ಲಿಂಗ್ಸ್ ಸಿಡಿಸಿದ ಭರ್ಜರಿ ಶತಕ ಹಾಗೂ ಅಲೆಕ್ಸ್ ಡೇವಿಸ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 285 ರನ್ ಸಿಡಿಸಿತು.  ಭಾರತ ಎ ಪರ ಮಯಾಂಕ್ ಮಾರ್ಕಂಡೆ, ಅಕ್ಸರ್ ಪಟೇಲ್ ಹಾಗೂ ಸಿದ್ದಾರ್ಥ್ ಕೌಲ್ ತಲಾ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್‌, ರಾಹುಲ್‌?

286 ರನ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ 59 ರನ್  ಸಿಡಿಸಿ ಆಸರೆಯಾದರು. ಇನ್ನು ಶ್ರೇಯಸ್ ಅಯ್ಯರ್ 45 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಇಶಾನ್ ಕಿಶನ್ ಹಾಗೂ ಕ್ರುನಾಲ್ ಪಾಂಡ್ಯ ಅಬ್ಬರಿಸಿದರು. ಕಿಶನ್ ಅಜೇಯ 57 ರನ್ ಸಿಡಿಸಿದರೆ, ಕ್ರುನಾಲ್ ಪಾಂಡ್ಯ 29 ರನ್ ಸಿಡಿಸಿದರು. ಈ ಮೂಲಕ ಭಾರತ 3 ವಿಕೆಟ್ ಗೆಲುವು ಸಾಧಿಸಿತು.