French Open: ಜೋಕೋ​ವಿಚ್‌ 2ನೇ ಸುತ್ತಿ​ಗೆ ಲಗ್ಗೆ

ಫ್ರೆಂಚ್ ಓಪನ್‌ ಗ್ರ್ಯಾನ್‌ಸ್ಲಾಂನಲ್ಲಿ ಶುಭಾರಂಭ ಮಾಡಿದ ಜೋಕೋವಿಚ್
ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಆಟಗಾರ
ಪುರು​ಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಅಮೆ​ರಿ​ಕದ ಕೊವ​ಸಿ​ವಿಚ್‌ ವಿರುದ್ಧ ಜಯಭೇರಿ

Novak Djokovic breezes into French Open 2023 second round kvn

ಪ್ಯಾರಿ​ಸ್‌(ಮೇ.30): 22 ಗ್ರ್ಯಾನ್‌ಸ್ಲಾಂ ಪ್ರಶ​ಸ್ತಿ​ಗಳ ಒಡೆಯ ನೋವಾಕ್‌ ಜೋಕೋ​ವಿಚ್‌ 2023ರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾ​ರಂಭ ಮಾಡಿ​ದ್ದಾರೆ. ಟೂರ್ನಿಯ 2 ಬಾರಿ ಚಾಂಪಿ​ಯನ್‌, ಸರ್ಬಿ​ಯಾದ ಜೋಕೋ ಸೋಮ​ವಾರ ಪುರು​ಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಅಮೆ​ರಿ​ಕದ ಕೊವ​ಸಿ​ವಿಚ್‌ ವಿರುದ್ಧ 6-3, 6-2, 7-6(7-1) ಸುಲಭ ಗೆಲುವು ಸಾಧಿ​ಸಿ​ದ​ರು. 2ನೇ ಸುತ್ತಿ​ನಲ್ಲಿ ಜೋಕೋ ಹಂಗೇ​ರಿಯ ಮಾರ್ಟೊನ್‌ ಫುಸ್ಕೋ​ವಿಕ್ಸ್‌ ವಿರುದ್ಧ ಆಡ​ಲಿ​ದ್ದಾರೆ.

ಇದೇ ವೇಳೆ ಮಹಿಳಾ ಸಿಂಗ​ಲ್ಸ್‌​ನಲ್ಲಿ 2018ರ ರನ್ನ​ರ್‌-ಅಪ್‌, 2017ರ ವಿಂಬ​ಲ್ಡನ್‌ ವಿಜೇತೆ ಅಮೆ​ರಿ​ಕಾದ ಸ್ಲೋನ್‌ ಸ್ಟೀಫನ್ಸ್‌, ಚೆಕ್‌ ಗಣ​ರಾ​ಜ್ಯದ ಕ್ಯಾರೋ​ಲಿನಾ ಪ್ಲಿಸ್ಕೋವಾ ವಿರುದ್ಧ 6-0, 6-4 ಅಂತ​ರ​ದಲ್ಲಿ ಜಯ​ಗ​ಳಿ​ಸಿ​ದರು. ಪುರು​ಷರ ಸಿಂಗ​ಲ್ಸ್‌​ನಲ್ಲಿ ಕೆನ​ಡಾದ ಡೆನಿಸ್‌ ಶಪೋ​ವ​ಲೊವ್‌ ಅಮೆ​ರಿ​ಕದ ಬ್ರೆಂಡನ್‌ ನಕ​ಶಿಮಾ ವಿರುದ್ಧ ಜಯ​ಗ​ಳಿ​ಸಿ​ದರೆ, ವಿಶ್ವ ನಂ.13, ಬ್ರಿಟ​ನ್‌ನ ಕ್ಯಾಮ​ರೂನ್‌ ನೋರಿ ಫ್ರಾನ್ಸ್‌ನ ಬೆನೋಟ್‌ ಪೈರ್‌ ವಿರುದ್ಧ ಗೆಲುವು ಸಾಧಿ​ಸಿ​ 2ನೇ ಸುತ್ತು ತಲು​ಪಿ​ದ​ರು.

ನೀರಜ್‌ಗೆ ಗಾಯ: ಡಚ್‌ ಅಥ್ಲೆಟಿಕ್ಸ್‌ ಕೂಟಕ್ಕೆ ಗೈರು

ನವ​ದೆ​ಹ​ಲಿ: ಒಲಿಂಪಿಕ್‌ ಚಾಂಪಿ​ಯನ್‌, ಭಾರ​ತದ ತಾರಾ ಜಾವೆ​ಲಿನ್‌ ಎಸೆ​ತ​ಗಾರ ನೀರಜ್‌ ಚೋಪ್ರಾ ಮುಂದಿನ ತಿಂಗಳು ನೆದ​ರ್‌​ಲೆಂಡ್‌್ಸನ ಹೆಂಗೆ​ಲೋ​ದಲ್ಲಿ ನಡೆ​ಯ​ಲಿ​ರುವ ಎಫ್‌​ಬಿಕೆ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಿಂದ ಹೊರ​ಗು​ಳಿ​ಯಲು ನಿರ್ಧ​ರಿ​ಸಿ​ದ್ದಾರೆ. ‘ತರ​ಬೇತಿ ವೇಳೆ ಸ್ನಾಯು ಸೆಳೆತ ಕಾಣಿ​ಸಿ​ಕೊಂಡಿದ್ದು, ವೈದ್ಯರ ಸೂಚ​ನೆ​ಯಂತೆ ಮುಂಜಾ​ಗೃತಾ ಕ್ರಮ​ವಾಗಿ ಗೇಮ್ಸ್‌​ಗೆ ಗೈರಾ​ಗ​ಲಿ​ದ್ದೇ​ನೆ​’ ವಿಶ್ವ ನಂ.1 ಚೋಪ್ರಾ ಟ್ವೀಟರ್‌ನಲ್ಲಿ ತಿಳಿ​ಸಿ​ದ್ದಾರೆ.

ಅಥ್ಲೆ​ಟಿಕ್ಸ್‌: ಭಾರತಕ್ಕೆ 2 ಚಿನ್ನ

ವೈನ್‌​ಹೈ​ಮ್‌​(​ಜ​ರ್ಮ​ನಿ​): ಭಾರ​ತದ ತಾರಾ ಅಥ್ಲೀ​ಟ್‌​ಗ​ಳಾದ ಜ್ಯೋತಿ ಯರ್ರಾಜಿ ಹಾಗೂ ಅಮ್ಲನ್‌ ಬೊರ್ಗೊ​ಹೈನ್‌ ಇಲ್ಲಿ ನಡೆದ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಚಿನ್ನದ ಪದಕ ಗೆದ್ದಿ​ದ್ದಾರೆ. ಮಹಿ​ಳೆ​ಯರ 100 ಮೀ. ಹರ್ಡ​ಲ್ಸ್‌​ನಲ್ಲಿ 23 ವರ್ಷದ ಜ್ಯೋತಿ 12.84 ಸೆಕೆಂಡ್‌​ಗ​ಳಲ್ಲಿ ಕ್ರಮಿಸಿ ಮೊದಲ ಸ್ಥಾನ ಪಡೆ​ದರು. ಪುರು​ಷರ 200 ಮೀ. ರೇಸ್‌​ನಲ್ಲಿ ಅಮ್ಲನ್‌ 20.66 ಸೆಕೆಂಡ್‌​ಗ​ಳಲ್ಲಿ ಕ್ರಮಿಸಿ ಚಿನ್ನ ತಮ್ಮ​ದಾ​ಗಿ​ಸಿ​ಕೊಂಡ​ರು.

Wrestlers Protest ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳ ವಿರು​ದ್ಧ ಎಫ್‌ಐಆರ್‌!

ಕಿರಿ​ಯರ ಹಾಕಿ ವಿಶ್ವ​ಕ​ಪ್‌​ಗೆ ಅರ್ಹತೆ ಪಡೆದ ಭಾರ​ತ

ಸಲಾಲ್ಹ(ಒಮಾನ್‌): 3 ಬಾರಿ ಚಾಂಪಿ​ಯನ್‌ ಭಾರತ ತಂಡ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಎಫ್‌​ಐ​ಎಚ್‌ ಕಿರಿಯರ ವಿಶ್ವಕಪ್‌ಗೂ ಅರ್ಹತೆ ಗಿಟ್ಟಿ​ಸಿ​ಕೊಂಡಿತು. 

ಭಾನು​ವಾರ ರಾತ್ರಿ ನಡೆದ ‘ಎ’ ಗುಂಪಿನ ಕೊನೆ ಪಂದ್ಯ​ದಲ್ಲಿ ಭಾರತ ತಂಡ ಥಾಯ್ಲೆಂಡ್‌ ವಿರುದ್ಧ 17-0 ಗೋಲು​ಗಳ ಬೃಹತ್‌ ಗೆಲುವು ಸಾಧಿ​ಸಿತು. ಇದ​ರೊಂದಿಗೆ ಟೂರ್ನಿ​ಯಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆದು ವಿಶ್ವ​ಕ​ಪ್‌​ನಲ್ಲೂ ಸ್ಥಾನ ಖಚಿ​ತ​ಪ​ಡಿ​ಸಿ​ಕೊಂಡಿತು. ಭಾನು​ವಾರದ ಪಂದ್ಯ​ದಲ್ಲಿ ಭಾರತ ಪರ ಅಂಗ​ದ್‌ಬಿರ್‌ ಸಿಂಗ್‌ 4 ಗೋಲು ಬಾರಿ​ಸಿ​ದರು. ಸೆಮಿ​ಫೈ​ನಲ್‌ ಪಂದ್ಯ​ಗಳು ಮೇ 31ರಂದು ನಡೆ​ಯ​ಲಿವೆ.

Latest Videos
Follow Us:
Download App:
  • android
  • ios