ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಬಳಿಕ ಬೌಲಿಂಗ್‌ನಲ್ಲೂ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. 201 ರನ್‌ಗೆ ಕಟ್ಟಿ ಹಾಕಿ 30 ರನ್ ಗೆಲುವು ಕಂಡಿದೆ. ಜೊತೆಗೆ ಸರಣಿ ಗೆದ್ದುಕೊಂಡಿದೆ.
ಅಹಮ್ಮದಾಬಾದ್ (ಡಿ.19) ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಅಂತ್ಯಗೊಂಡಿದೆ. ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ ಪ್ರದರ್ಶನಕ್ಕೆ ಸೌತ್ ಆಪ್ರಿಕಾ ಬೆಚ್ಚಿ ಬಿದ್ದಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತ 231 ರನ್ ಸಿಡಿಸಿತ್ತು. ಇತ್ತ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡಕ್ಕೆ ಭಾರತ ಶಾಕ್ ಕೊಟ್ಟಿತು. ವರುಣ್ ಚಕ್ರವರ್ತಿ ಸೇರಿದಂತೆ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಸೌತ್ ಆಫ್ರಿಕಾ 201 ರನ್ ಸಿಡಿಸಿತು. ಈ ಮೂಲಕ ಭಾರತ 30 ರನ್ ಗೆಲುವು ಕಂಡಿತು.
ಬುಮ್ರಾ-ವರುಣ್ ದಾಳಿಗೆ ಸೌತ್ ಆಫ್ರಿಕಾ ಉಡೀಸ್
ಕೊನೆಯವರೆಗೂ ಸೌತ್ ಆಫ್ರಿಕಾ ಹೋರಾಟ ನಡೆಸಿತು. ಆದರೆ ವಿಕೆಟ್ ಉಳಿಸಿಕೊಳ್ಳುಲು ಸಾಧ್ಯವಾಗದೆ ಪರದಾಡಿತು. ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ದಾಳಿಗೆ ಸೌತ್ ಆಫ್ರಿಕಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭದಲ್ಲೇ ವರುಣ್ ಮೋಡಿಗೆ ಸೌತ್ ಆಪ್ರಿಕಾ ರನ್ ಗಳಿಸಲು ಪರದಾಡಿತು. ಇತ್ತ ಸೌತ್ ಆಫ್ರಿಕಾ ತಂಡಕ್ಕೆ ಆಸರೆಯಾಗಿದ್ದ ಕ್ವಿಂಟನ್ ಡಿಕಾಕ್ ಅಬ್ಬರಕ್ಕೆ ಬುಮ್ರಾ ಬೇಕ್ ಬಾಕಿದ್ದರು. ಡಿಕಾಕ್ 35 ಎಸೆದಲ್ಲಿ 65 ರನ್ ಸಿಡಿಸಿ ಅಪಾಯದ ಸೂಚನೆ ನೀಡಿದ್ದರು. ಆದರೆ ಡಿಕಾಕ್‍ಗೆ ಬುಮ್ರಾ ಬ್ರೇಕ್ ಹಾಕಿದರು. ವರುಣ್ ಚಕ್ರವರ್ತಿ ನಾಲ್ಕು ವಿಕೆಟ್ ಕಬಳಿಸಿದರೆ, ಬುಮ್ರಾ 2, ಅರ್ಶದೀಪ್ ಹಾಗೂ ಹಾರ್ದಿಕ್ ಪಾಂಡ್ಯ ತವಾ 1 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಸೌತ್ ಆಫ್ರಿಕಾ ತಂಡ ರನ್ ಸಿಡಿಸಿ ಸೋಲೋಪ್ಪಿಕೊಂಡಿತು.
3-1 ಅಂತರದಲ್ಲಿ ಟ್ರೋಫಿ ಗೆದ್ದ ಭಾರತ
ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಲ ಟಿ20 ಸರಣಿ ಅಂತ್ಯಗೊಂಡಿದೆ. ಈ ಪೈಕಿ ನಾಲ್ಕನೇ ಟಿ20 ಪಂದ್ಯ ದಟ್ಟ ಮಂಜಿನ ಕಾರಣ ರದ್ದಾಗಿತ್ತು. ಇದು ಸೌತ್ ಆಫ್ರಿಕಾಗೆ ಭಾರಿ ಸಂಕಷ್ಟ ತಂದೊಡ್ಡಿತ್ತು. 5 ಪಂದ್ಯಗಳ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿದೆ.
2025ರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಿ20 ಬೌಲರ್
- ವರುಣ್ ಚಕ್ರವರ್ತಿ (36 ವಿಕೆಟ್)
- ಮೊಹಮ್ಮದ್ ನವಾಜ್ (36 ವಿಕೆಟ್)
- ಜಾಕೋಬ್ ಡುಫಿ (35 ವಿಕೆಟ್)
- ರಿಶಾದ್ ಹೊಸೈನ್ (33 ವಿಕೆಟ್)
- ಜೇಸನ್ ಹೋಲ್ಡರ್ (31 ವಿಕೆಟ್)
ಕ್ಯಾಲೆಂಡರ್ ವರ್ಷದಲ್ಲಿ ಟೀಂ ಇಂಡಿಯಾ ಬೌಲರ್ಸ್ ಗರಿಷ್ಠ ಟಿ20 ವಿಕೆಟ್ ಸಾಧನೆ
- ಭುವನೇಶ್ವರ್ ಕುಮಾರ್ (37 ವಿಕೆಟ್) 2022
- ಅರ್ಶದೀಪ್ ಸಿಂಗ್ (36 ವಿಕೆಟ್) 2024
- ವರುಣ್ ಚಕ್ರವರ್ತಿ (36 ವಿಕೆಟ್) 2025
- ಅರ್ಶದೀಪ್ ಸಿಂಗ್ (33 ವಿಕೆಟ್) 2022
- ಜಸ್ಪ್ರೀತ್ ಬುಮ್ರಾ (28 ವಿಕೆಟ್) 2026


