ಬೆಂಗಳೂರು[ನ.03]: ಟಿ20 ತಂಡದಿಂದ ಮಹೇಂದ್ರ ಸಿಂಗ್ ಧೋನಿಯನ್ನು ಕೈಬಿಟ್ಟಿರುವ ಬೆನ್ನಲ್ಲೇ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಇದೀಗ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಮಾಜಿ ನಾಯಕನ ಪರ ಬ್ಯಾಟ್ಸ್ ಬೀಸಿದ್ದಾರೆ. ಧೋನಿ ತಂಡದಲ್ಲಿದ್ದರೆ ವಿರಾಟ್ ಕೊಹ್ಲಿಗೆ ಅನುಕೂಲವಾಗಲಿದೆ ಹಾಗೆಯೇ ಆಸ್ಟ್ರೇಲಿಯಾ ಸರಣಿಯಲ್ಲಿ ಕಮ್’ಬ್ಯಾಕ್ ಮಾಡಲಿದ್ದಾರೆ ಎಂದು ನೆಹ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಟಿ20ಯಿಂದ ಡ್ರಾಪ್ ಆದ ಧೋನಿಗೆ ಗವಾಸ್ಕರ್ ನೀಡಿದ ಸಲಹೆ ಏನು?

ರಿಶಭ್ ಪಂತ್, ದಿನೇಶ್ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಆಡಿರಬಹುದು. ಧೋನಿಗೆ ಅವರೆಲ್ಲಾ ಸಾಟಿಯಾಗಲಾರರು. ಜತೆಗೆ ಇವರೆಲ್ಲಾ ಧೋನಿಯ ಹತ್ತಿರವೂ ಸುಳಿಯಲಾರರು. ಧೋನಿ ಕ್ರಿಕೆಟಿಗನಾಗಿ ಮಾತ್ರವಲ್ಲ. ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಮುಖ್ಯವಾಗಿ ನಾಯಕ ವಿರಾಟ್ ಕೊಹ್ಲಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಏಷ್ಯಾಕಪ್ ಹಾಗೂ ಇತ್ತೀಚಿನ ಸರಣಿಗಳಲ್ಲಿ ಧೋನಿ ಉತ್ತಮವಾಗಿ ಆಡದೇ ಇರಬಹುದು ಆದರೆ, ಇನ್ನೆರಡು ತಿಂಗಳು ಬಳಿಕ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಫಾರ್ಮ್’ಗೆ ಮರಳಲಿದ್ದಾರೆ ಎಂದು ನೆಹ್ರಾ ಹೇಳಿದ್ದಾರೆ.

ಇದನ್ನು ಓದಿ: ಟಿ20 ಯಿಂದ ಧೋನಿ ಡ್ರಾಪ್- ಕಾರಣ ಬಹಿರಂಗ ಪಡಿಸಿದ ಕೊಹ್ಲಿ!

ಧೋನಿ 2018ರಲ್ಲಿ ಒಟ್ಟು 18 ಪಂದ್ಯಗಳನ್ನಾಡಿ 25.20 ಸರಾಸರಿಯಲ್ಲಿ ಕೇವಲ 252 ರನ್ ಸಿಡಿಸಿದ್ದಾರೆ. ಈ ವರ್ಷ ಧೋನಿ ಬ್ಯಾಟ್’ನಿಂದ ಒಂದೇ ಒಂದು ಅರ್ಧಶತಕ ಕೂಡಾ ಸಿಡಿದಿಲ್ಲ. ಹೀಗಾಗಿಯೇ ಧೋನಿ ಅವರನ್ನು ಟಿ20 ಟೀಂ ಇಂಡಿಯಾದಿಂದ ಹೊರಗಿಡಲಾಗಿದೆ.

ಇದನ್ನು ಓದಿ: ಅತಿಹೆಚ್ಚು ಬಲಿಪಡೆದ ಟಾಪ್ 5 ವಿಕೆಟ್’ಕೀಪರ್’ಗಳಿವರು