ಬೆಂಗಳೂರು[ಅ.30]: ಕ್ರಿಕೆಟ್’ನಲ್ಲಿ ವಿಕೆಟ್’ಕೀಪರ್’ಗಳು ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತಾರೆ. ವಿಕೆಟ್ ಹಿಂದೆ ನಿಂತು ಎದುರಾಳಿ ತಂಡದ ಬ್ಯಾಟ್ಸ್’ಮನ್’ಗಳನ್ನು ಬಲಿ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಕ್ಷಮತೆ ಹೊಂದಿರುತ್ತಾರೆ.

ಅದರಲ್ಲೂ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಾಕಷ್ಟು ವಿಕೆಟ್’ಕೀಪರ್’ಗಳು ದೀರ್ಘಕಾಲ ತಂಡವನ್ನು ಪ್ರತಿನಿಧಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಮೈದಾನದ ಮಧ್ಯದಲ್ಲಿ ನಿಂತು ತಮ್ಮ ಚಾಣಾಕ್ಷ ವಿಕೆಟ್’ಕೀಪಿಂಗ್ ಮೂಲಕ ಪಂದ್ಯದ ಕೇಂದ್ರ ಬಿಂದುವೆನಿಸುವ ಇವರು ತಮ್ಮ ಕ್ಷೇತ್ರದಲ್ಲಿ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್ ಧೋನಿ, ದಕ್ಷಿಣ ಆಫ್ರಿಕಾದ ದಿಗ್ಗಜ ವಿಕೆಟ್’ಕೀಪರ್ ಮಾರ್ಕ್ ಬೌಷರ್[424] ದಾಖಲೆಯನ್ನು ಸರಿಗಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ನಲ್ಲಿ ಅತಿಹೆಚ್ಚು ಬಲಿಪಡೆದ ಟಾಪ್ 5 ವಿಕೆಟ್’ಕೀಪರ್’ಗಳ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ...