2022ರ ಕಾಮನ್‌ವೆಲ್ತ್'ನಲ್ಲಿ ಶೂಟಿಂಗ್ ಸ್ಪರ್ಧೆ ಇಲ್ಲ !

First Published 25, Feb 2018, 8:05 PM IST
No shooting at 2022 Commonwealth Games
Highlights

ಒಲಿಂಪಿಕ್ ಶೂಟಿಂಗ್ ಪದಕ ವಿಜೇತ ಹಾಗೂ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಹ ಶೂಟಿಂಗ್ ಕ್ರೀಡೆಯನ್ನು ಕಿತ್ತೊಗೆಯದಂತೆ ಮನವಿ ಮಾಡಿದ್ದರು.

ನವದೆಹಲಿ(ಫೆ.25): 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸ್ಪರ್ಧೆ ಇರುವುದಿಲ್ಲ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಸ್ಪಷ್ಟಪಡಿಸಿದೆ.

ಭಾರತ ಸೇರಿದಂತೆ ಕಾಮನ್‌ವೆಲ್ತ್ ಒಕ್ಕೂಟಕ್ಕೆ ಸೇರಿದ ಹಲವು ರಾಷ್ಟ್ರಗಳ ಶೂಟರ್‌ಗಳ ಮನವಿಯನ್ನು ಫೆಡರೇಷನ್ ತಿರಸ್ಕರಿಸಿದೆ. ಒಲಿಂಪಿಕ್ ಶೂಟಿಂಗ್ ಪದಕ ವಿಜೇತ ಹಾಗೂ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಹ ಶೂಟಿಂಗ್ ಕ್ರೀಡೆಯನ್ನು ಕಿತ್ತೊಗೆಯದಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಯಾವುದೇ ಪುರಸ್ಕಾರ ದೊರೆತಿಲ್ಲ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಕ್ರೀಡಾಕೂಟ ನಡೆಯಲಿದ್ದು, ಟೇಬಲ್ ಟೆನಿಸ್, ಜುಡೋ, ಕುಸ್ತಿ, ಸೈಕ್ಲಿಂಗ್, ಡೈವಿಂಗ್ ಹಾಗೂ 3*3 ಬಾಸ್ಕೆಟ್‌ಬಾಲ್ ಅನ್ನು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ವರದಿಯಾಗಿದೆ.

loader