ಲಂಡನ್‌(ಮೇ26): ಐಸಿಸಿ ಏಕದಿನ ವಿಶ್ವಕಪ್‌ ಆರಂಭಕ್ಕೂ ಮುನ್ನ ಆತಂಕಕ್ಕೀಡಾಗಿದ್ದ ಭಾರತ ತಂಡ ನಿರಾಳವಾಗಿದೆ. ಶುಕ್ರವಾರ ಅಭ್ಯಾಸದ ವೇಳೆ ಗಾಯಗೊಂಡಿದ್ದ ಆಲ್ರೌಂಡರ್‌ ವಿಜಯ್‌ ಶಂಕರ್‌, ಜೂ.5ರಂದು ದ.ಆಫ್ರಿಕಾ ವಿರುದ್ಧ ನಡೆಯಲಿರುವ ಮೊದಲ ಪಂದ್ಯದ ವೇಳೆಗೆ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿದೆ. 

ಇದನ್ನೂ ಓದಿ: ವಿಶ್ವಕಪ್‌ನಲ್ಲಿ 2 ಥರದ ಜೆರ್ಸಿ ತೊಡಲಿರುವ ಭಾರತ

ಶುಕ್ರವಾರ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವೇಳೆ ವಿಜಯ್‌ ಶಂಕರ್‌ ತೋಳಿಗೆ ಪೆಟ್ಟು ಬಿದ್ದಿತು. ಆದರೆ ತೋಳಿನ ಮೂಳೆ ಮುರಿದಿಲ್ಲ ಎನ್ನುವುದು ಎಕ್ಸ್‌-ರೇ ಮೂಲಕ ತಿಳಿದು ಬಂದಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ: ಕೊಹ್ಲಿ ಹಾಗೂ ಧೋನಿಗೆ ನಟಿ ಉರ್ವಶಿ ರೌಟೆಲಾ ಟ್ವೀಟ್

ಸದ್ಯ ಅಭ್ಯಾಸ ಪಂದ್ಯ ಆಡುತ್ತಿರುವ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ ನ್ಯೂಜೆಲೆಂಡ್ ವಿರುದ್ಧ ಮುಗ್ಗರಿಸಿದೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತದ ಹೋರಾಟ ಜೂನ್ 5 ರಿಂದ ಆರಂಭಗೊಳ್ಳಲಿದೆ.