ಪೋರ್ಟ್ ಆಫ್ ಸ್ಪೇನ್[ಆ.11]: ಭಾರತ ವಿರುದ್ಧ ವಿದಾಯದ ಟೆಸ್ಟ್ ಸರಣಿಯನ್ನಾಡುವ ಕ್ರಿಸ್ ಗೇಲ್ ಆಸೆ ಕಮರಿದೆ. 2 ಪಂದ್ಯಗಳ ಟೆಸ್ಟ್ ಸರಣಿಗೆ ವಿಂಡೀಸ್ ತಂಡದಲ್ಲಿ ಗೇಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 

ಇಂಡೋ-ವಿಂಡೀಸ್ ಫೈಟ್: ಮಳೆಯ ಭೀತಿಯಲ್ಲಿ 2ನೇ ಏಕದಿನ ಪಂದ್ಯ..!

ಆಗಸ್ಟ್ 22 ರಿಂದ ಆ್ಯಟಿಗುವಾದಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿ ಶುರುವಾಗಲಿದೆ. ಟೆಸ್ಟ್ ಸರಣಿಗೆ 13 ಆಟಗಾರರ ವಿಂಡೀಸ್ ತಂಡ ಶನಿವಾರ ಪ್ರಕಟಿಸಲಾಯಿತು. 2014ರಲ್ಲಿ ಗೇಲ್ ಕೊನೆಯ ಟೆಸ್ಟ್ ಆಡಿದ್ದರು. 

ಗೇಲ್ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ಕೊಹ್ಲಿ..! ವಿಡಿಯೋ ವೈರಲ್‌!

ವಿಶ್ವದ ಅತಿ ತೂಕದ ಕ್ರಿಕೆಟಿಗ ಕಾರ್ನವಾಲ್: ಭಾರತ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಗೆ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿರುವ ರಂಕಿಮ್ ಕಾರ್ನವಾಲ್ ವಿಶ್ವದ ಅತಿ ತೂಕದ ಕ್ರಿಕೆಟಿಗ ಎನಿಸಿದ್ದಾರೆ. 140 ಕೆಜಿ ತೂಕವಿರುವ ಕಾರ್ನವಾಲ್, 6 ಅಡಿ 6 ಇಂಚು ಎತ್ತರವಿದ್ದು ಆಲ್ರೌಂಡರ್ ಆಗಿದ್ದಾರೆ.

ಗೇಲ್-ಮಲ್ಯ ಮುಖಾಮುಖಿ: ಭಾರತಕ್ಕೆ ಕೊರಿಯರ್ ಮಾಡಿ ಎಂದ ಜನ..!

ವೆಸ್ಟ್ ಇಂಡೀಸ್ ತಂಡ ಹೀಗಿದೆ:
ಕ್ರೇಗ್ ಬ್ರಾಥ್’ವೇಟ್, ಜಾನ್ ಕ್ಯಾಂಪ್’ಬೆಲ್, ಶೈ ಹೋಪ್, ಶಮರ್ ಬ್ರೂಕ್ಸ್, ಡ್ಯಾರನ್ ಬ್ರಾವೋ, ಶಿಮ್ರೋನ್ ಹೆಟ್ಮೇಯರ್, ರೋಸ್ಟನ್ ಚೇಸ್, ಶೇನ್ ಡೌರಿಚ್[ವಿಕೆಟ್ ಕೀಪರ್], ಜೇಸನ್ ಹೋಲ್ಡರ್[ನಾಯಕ], ಕೀಮೋ ಪೌಲ್, ರಂಕಿಮ್ ಕಾರ್ನವಾಲ್, ಕೀಮರ್ ರೋಚ್, ಶೆನಾನ್ ಗೇಬ್ರಿಯಲ್.