ಸುಲಭ ಗೆಲುವು ಕೈಚೆಲ್ಲಿದ ಭಾರತ ಮಹಿಳಾ ತಂಡ!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೀನಾಯ ಸೋಲು ಕಂಡರೆ, ಇತ್ತ ಮಹಿಳಾ ತಂಡ ಸುಲಭ ಗೆಲುವನ್ನ ಕೈಚೆಲ್ಲಿದೆ. ಕಿವೀಸ್ ವಿರುದ್ದದ ಮೊದಲ ಟಿ20 ಪಂದ್ಯದ ಹೈಲೈಟ್ಸ್ ಇಲ್ಲಿದೆ.

New zeland women beat India by 23 run and take series lead

ವೆಲ್ಲಿಂಗ್ಟನ್‌(ಫೆ.07): ಸ್ಮೃತಿ ಮಂಧನಾ ಆಕರ್ಷಕ ಅರ್ಧಶತಕದ ಹೊರತಾಗಿಯೂ ಭಾರತ ಮಹಿಳಾ ತಂಡ ಬುಧವಾರ ಇಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 23 ರನ್‌ ಸೋಲು ಅನುಭವಿಸಿತು. 3 ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ 1-0 ಮುನ್ನಡೆ ಪಡೆಯಿತು.

"

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 159 ರನ್‌ ಕಲೆಹಾಕಿತು. 160 ರನ್‌ಗಳ ಗುರಿ ಬೆನ್ನತ್ತಿದ ಭಾರತ, 12ನೇ ಓವರ್‌ನಲ್ಲಿ 1 ವಿಕೆಟ್‌ ನಷ್ಟಕ್ಕೆ 102 ರನ್‌ ಗಳಿಸಿತ್ತು. ಆದರೆ ದಿಢೀರ್‌ ಕುಸಿತ ಕಂಡು 19.1 ಓವರ್‌ಗಳಲ್ಲಿ 136 ರನ್‌ಗೆ ಆಲೌಟ್‌ ಅಯಿತು. 34 ರನ್‌ಗೆ ಕೊನೆ 9 ವಿಕೆಟ್‌ಗಳು ಪತನಗೊಂಡವು.

ಇದನ್ನೂ ಓದಿ: IPL 2019: ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ RCB

ಮನಮೋಹಕ ಬ್ಯಾಟಿಂಗ್‌ ನಡೆಸಿದ ಸ್ಮೃತಿ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕದ ದಾಖಲೆ ಬರೆದರು. 24 ಎಸೆತಗಳಲ್ಲಿ 50 ರನ್‌ ಗಳಿಸಿದ ಮಂಧನಾ, 34 ಎಸೆತಗಳಲ್ಲಿ 58 ರನ್‌ ಕಲೆಹಾಕಿದರು.

ಕಠಿಣ ಗುರಿ ಬೆನ್ನತ್ತಲು ಇಳಿದ ಭಾರತ, ಮೊದಲ ಓವರ್‌ನಲ್ಲೇ ಪ್ರಿಯಾ ಪೂನಿಯಾ (04) ವಿಕೆಟ್‌ ಕಳೆದುಕೊಂಡಿತು. ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ, ನಿರೀಕ್ಷಿತ ಆಟವಾಡಲಿಲ್ಲ. 2ನೇ ವಿಕೆಟ್‌ಗೆ ಜತೆಯಾದ ಸ್ಮೃತಿ ಹಾಗೂ ಜೆಮಿಮಾ ರೋಡ್ರಿಗಾಸ್‌ 98 ರನ್‌ ಜೊತೆಯಾಟವಾಡಿದರು. 33 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಜೆಮಿಮಾ 39 ರನ್‌ ಗಳಿಸಿದರು. 12ನೇ ಓವರ್‌ನಲ್ಲಿ ಮಂಧನಾ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಭಾರತದ ಕುಸಿತ ಆರಂಭವಾಯಿತು. ಹೇಮಲತಾ (03), ನಾಯಕಿ ಹರ್ಮನ್‌ಪ್ರೀತ್‌ (17), ಅನುಜಾ ಪಾಟೀಲ್‌ (0), ಅರುಂಧತಿ ರೆಡ್ಡಿ (02), ದೀಪ್ತಿ ಶರ್ಮಾ (05), ತಾನಿಯಾ ಭಾಟಿಯಾ (05) ಯಾರೊಬ್ಬರೂ ಸಹ ಹೋರಾಟ ನಡೆಸಲಿಲ್ಲ. ಕಿವೀಸ್‌ ಪರ ಲೀ ತಹುಹು 3 ವಿಕೆಟ್‌ ಕಿತ್ತರು.

ಇದನ್ನೂ ಓದಿ: ಕೊಹ್ಲಿ, ಗೇಲ್ ಅಲ್ಲ- ಗರಿಷ್ಠ ಸ್ಟ್ರೈಕ್ ರೇಟ್ ಹೊಂದಿದ 5 IPL ಬ್ಯಾಟ್ಸ್‌ಮನ್!

ಡಿವೈನ್‌ ಅರ್ಧಶತಕ: ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟನ್ಯೂಜಿಲೆಂಡ್‌ ಸ್ಫೋಟಕ ಆರಂಭವನ್ನೇನೂ ಪಡೆಯಲಿಲ್ಲ. ಸೂಝಿ ಬೇಟ್ಸ್‌ (07), ಕ್ಯಾಟಲಿನ್‌ ಗರ್ರಿ (15) ತಂಡದ ಮೊತ್ತ 50 ರನ್‌ ತಲುಪುವ ವೇಳೆಗೆ ಔಟಾದರು. ಆದರೆ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್‌ (62) ಹಾಗೂ ನಾಯಕಿ ಏಮಿ ಸ್ಯಾಥರ್‌ವೇಟ್‌ (33) ತಂಡಕ್ಕೆ ಆಸರೆಯಾದರು. 14 ಎಸೆತಗಳಲ್ಲಿ 27 ರನ್‌ ಸಿಡಿಸಿದ ವಿಕೆಟ್‌ ಕೀಪರ್‌ ಕ್ಯಾಟಿ ಮಾರ್ಟಿನ್‌ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಸ್ಟೀವ್‌ ಸ್ಮಿತ್‌ ಆಡೋದು ಡೌಟ್!

ಸ್ಕೋರ್‌: ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 159/4 (ಡಿವೈನ್‌ 62, ಸ್ಯಾಥರ್‌ವೇಟ್‌ 33, ದೀಪ್ತಿ 1-19), ಭಾರತ 19.1 ಓವರ್‌ಗಳಲ್ಲಿ 136/10 (ಸ್ಮೃತಿ 58, ಜೆಮಿಮಾ 39, ತಹುಹು 3-20)

Latest Videos
Follow Us:
Download App:
  • android
  • ios