ಬೆಂಗಳೂರು(ಫೆ.06): ಐಪಿಎಲ್ ಟೂರ್ನಿಗಾಗಿ ಫ್ರಾಂಚೈಸಿಗಳ ಸಿದ್ಧತೆ ಜೋರಾಗಿದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಯಾರಿ ಆರಂಭಿಸಿದೆ.  ಆರ್‌ಸಿಬಿಗೆ ಆಯ್ಕೆಯಾಗಿರೋ ದೇಸಿ ಕ್ರಿಕೆಟಿಗರ ತರಬೇತಿ ಶಿಬಿರ ಆರಂಭಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ತಯಾರಿ ಶುರು ಮಾಡಿದೆ.

ಇದನ್ನೂ ಓದಿ: ಮುಂಬೈ ವಾಂಖೆಡೆಯಲ್ಲಿ ಐಪಿಎಲ್ ಪಂದ್ಯ ಡೌಟ್-ಬಿಸಿಸಿಐಗೆ ತಲೆನೋವು!

RCB ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಮಾರ್ಗದರ್ಶನದಲ್ಲಿ ಯುವ ಕ್ರಿಕೆಟಿಗರ ಅಭ್ಯಾಸ ಆರಂಭಗೊಂಡಿದೆ. ವಾಶಿಂಗ್ಟನ್ ಸುಂದರ್, ಆಕ್ಷದೀಪ್ ನಾಥ್, ದೇವದತ್ ಪಡಿಕ್ಕಲ್, ಗುರುಕೀರತ್ ಸಿಂಗ್ ಮಾನ್, ಹಿಮ್ಮತ್ ಸಿಂಗ್, ಕುಲ್ವಂತ್ ಕೆಜ್ರೋಲಿಯ, ಮಿಲಿಂದ್ ಕುಮಾರ್, ಪ್ರಯಾಸ್ ರೇ ಬರ್ಮನ್, ಶಿವಂ ದುಬೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಸ್ಟೀವ್‌ ಸ್ಮಿತ್‌ ಆಡೋದು ಡೌಟ್!

ಕಳೆದ 11 ಐಪಿಎಲ್ ಆವೃತ್ತಿಗಳಲ್ಲಿ ಬಲಿಷ್ಠ ತಂಡವಾಗಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಇದೀಗ 12ನೇ ಆವೃತ್ತಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ RCB ಈಗಿನಿಂದಲೇ ಅಭ್ಯಾಸ ಆರಂಭಿಸಿದೆ.