ವೆಲ್ಲಿಂಗ್ಟನ್‌[ಜ.28]: ನ್ಯೂಜಿಲೆಂಡ್‌ನ ಎವೆನ್‌ ಚಾಟ್‌ಫೀಲ್ಡ್‌ ತಮ್ಮ 68ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 

ಚೆನ್ನೈ ಸೂಪರ್’ಕಿಂಗ್ಸ್ ಮಾಜಿ ಆಲ್ರೌಂಡರ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ..!

ವೇಗದ ಬೌಲರ್‌ ಆಗಿದ್ದ ಚಾಟ್‌ಫೀಲ್ಡ್‌ 1975ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್‌ ಪರ 43 ಟೆಸ್ಟ್‌ ಮತ್ತು 114 ಏಕದಿನ ಪಂದ್ಯಗಳನ್ನಾಡಿದ್ದ ಅವರು ಕ್ರಮವಾಗಿ 123 ಹಾಗೂ 140 ವಿಕೆಟ್ ಪಡೆದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದ ಬಳಿಕ ಕ್ಲಬ್‌ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. 

ನಿವೃತ್ತಿ ಪ್ಲಾನ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ..!

ಇತ್ತೀಚೆಗೆ ಕ್ಲಬ್‌ ಪಂದ್ಯವೊಂದರಲ್ಲಿ ಅತ್ಯಂತ ದುಬಾರಿಯಾದ ಬಳಿಕ ತಮ್ಮಿಂದ ಬೌಲ್‌ ಮಾಡಲು ಇನ್ನು ಸಾಧ್ಯವಿಲ್ಲ ಎಂದು ಅವರಿಗೆ ಅನಿಸಿತಂತೆ. ಹೀಗಾಗಿ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾಗಿ ಟಾಲರ್‌ಫೀಲ್ಡ್‌ ತಿಳಿಸಿದ್ದಾರೆ.

ಗುಡ್ ಬೈ 2018: ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ಕ್ರಿಕೆಟ್ ದಿಗ್ಗಜರು