ಕೇಪ್‌ಟೌನ್(ಜ.10): ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಅಲ್ಬಿ ಮಾರ್ಕೆಲ್, ಮೂರೂ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಮಾರ್ಕೆಲ್, ದಕ್ಷಿಣ ಆಫ್ರಿಕಾ ಪರ 58  ಏಕದಿನ, 50 ಟಿ20 ಮತ್ತು ಒಂದು ಟೆಸ್ಟ್ ಪಂದ್ಯವನ್ನಾಡಿದ್ದಾರೆ.

ಮಾರ್ಕೆಲ್ ಒಟ್ಟಾಗಿ 1412 ರನ್ ಮತ್ತು 77 ವಿಕೆಟ್ ಕಬಳಿಸಿದ್ದಾರೆ. 37 ವರ್ಷದ ಆಲ್ರೌಂಡರ್, ಈಗಾಗಲೇ ಕ್ರಿಕೆಟ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಈಗ ಕ್ರಿಕೆಟ್ 20 ವರ್ಷದ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಟಿ20 ಮಾದರಿಯಲ್ಲಿ ಅತ್ಯಂತ ಪರಿಣಾಮಕಾರಿ ಬ್ಯಾಟ್ಸ್‌ಮನ್ ಆಗಿರುವ ಮಾರ್ಕೆಲ್, 2011ರಲ್ಲಿ ಚೆನ್ನೈ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.