Asianet Suvarna News Asianet Suvarna News

ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ಬರೆದ ನೇಪಾಳ!

ವಿಶ್ವ ಕ್ರಿಕೆಟ್‌ನಲ್ಲಿ ಪುಟ್ಟ ಹೆಜ್ಜೆ ಇಡುತ್ತಿರುವ ನೇಪಾಳ ಕ್ರಿಕೆಟ್ ಐತಿಹಾಸಿಕ ಸಾಧನೆ ಮಾಡಿದೆ. ನೇಪಾಳ ಕ್ರಿಕೆಟ್ ಇತಿಹಾಸದಲ್ಲಿ 2019ನೇ ವರ್ಷ ಅತ್ಯಂತ ಸ್ಮರಣೀಯವಾಗಿದೆ. ಇದೇ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದಿಕೊಂಡಿದೆ. 
 

Nepal create history first ever ODI series win after beating UAE
Author
Bengaluru, First Published Jan 29, 2019, 1:29 PM IST

ದುಬೈ(ಜ.29): ಯುಎಇ ವಿರುದ್ದದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗೆಲುವು ದಾಖಲಿಸಿದ ನೇಪಾಳ, ಇದೇ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ದಾಖಲೆ ಬರೆದಿದೆ. 3 ಪಂದ್ಯದ ಸರಣಿಯಲ್ಲಿ ನೇಪಾಳ 2-1 ಅಂತರದಲ್ಲಿ ಗೆದ್ದುಕೊಂಡು ಚೊಚ್ಚ ಟ್ರೋಫಿಗೆ ಮುತ್ತಿಕ್ಕಿದೆ. ನಿರ್ಣಾಯಕ ಪಂದ್ಯದಲ್ಲಿ ಯುಎಇ 6 ವಿಕೆಟ್ ನಷ್ಟಕ್ಕೆ 254 ರನ್ ಸಿಡಿಸಿತ್ತು. ಶೈಮಾನ್ ಅನ್ವರ್ 87 ರನ್ ಸಿಡಿಸಿದರೆ, ಮೊಹಮ್ಮದ್ ಬಿ ಅಜೇಯ 59 ರನ್ ಚಚ್ಚಿದರು.  ಸಿಪಿ ರಿಜ್ವಾನ್ 45 ರನ್ ಕಾಣಿಕೆ ನೀಡಿದರು. ಈ ಮೂಲಕ ನೇಪಾಳ ಗೆಲುವಿಗೆ 255 ರನ್ ಟಾರ್ಗೆಟ್ ನೀಡಲಾಯಿತು.

ಇದನ್ನೂ ಓದಿ: 2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟ

ಬೃಹತ್ ಗುರಿ ಪಡೆದ ನೇಪಾಳ ತಂಡಕ್ಕೆ ನಾಯಕ ಪರಾಸ್ ಖಡ್ಕಾ ಆಸರೆಯಾದರು. ಭರ್ಜರಿ ಶತಕ ಸಿಡಿಸಿದ ಪರಾಸ್ ನೇಪಾಳ ತಂಡದ ಗೆಲುವನ್ನ ಖಚಿತಪಡಿಸಿದರು. ಗ್ಯಾನೇಂದ್ರ ಮಲ್ಲ 31 ರನ್ ಸಿಡಿಸಿದರೆ, ಆರಿಫ್ ಶೇಕ್ ಅಜೇಯ 21 ಹಾಗೂ ಸೊಂಪಾಲ್ ಕಮಿ ಅಜೇಯ ರನ್ 26 ರನ್ ಸಿಡಿಸಿದರು. ಈ ಮೂಲಕ ನೇಪಾಳ 44.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಇದನ್ನೂ ಓದಿ: ಅಂಬಾಟಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ತಾಕೀತು

ಮೊದಲ ಏಕದಿನ ಪಂದ್ಯದಲ್ಲಿ ಯುಎಇ 3  ವಿಕೆಟ್ ಗೆಲುವು ಸಾಧಿಸಿತ್ತು. ಬಳಿಕ 2ನೇ ಏಕದಿನದಲ್ಲಿ ಕಮ್‌ಬ್ಯಾಕ್ ಮಾಡಿದ ನೇಪಾಳ 145 ರನ್ ಗೆಲುವು ದಾಖಲಿಸಿತು. ಹೀಗಾಗಿ ಅಂತಿಮ ಏಕದಿನ ಪಂದ್ಯ ಸರಣಿ ನಿರ್ಧಾರದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ನೇಪಾಳ 4 ವಿಕೆಟ್ ಗೆಲುವು ಸಾಧಿಸಿ 2-1 ಅಂತರದಲ್ಲಿ ಸರಣಿ ಗೆದ್ದಿತು. ಇದೇ ಮೊದಲ ಬಾರಿಗೆ ನೇಪಾಳ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.

Follow Us:
Download App:
  • android
  • ios