ದುಬೈ(ಜ.29): ಅನುಮಾನಸ್ವದ ಬೌಲಿಂಗ್ ಆರೋಪಕ್ಕೆ ಗುರಿಯಾಗಿದ್ದ ಭಾರತ ತಂಡದ ಅಂಬಾಟಿ ರಾಯುಡುಗೆ ಐಸಿಸಿ ಬೌಲಿಂಗ್ ಮಾಡದಂತೆ ತಾಕೀತು ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಅನುಮಾನಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿತ್ತು.

ಇದನ್ನೂ ಓದಿ: ಗಿಲ್‌ಗಿರುವ 10% ರಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ: ವಿರಾಟ್ ಕೊಹ್ಲಿ!

ರಾಯುಡು ಬೌಲಿಂಗ್ ಶೈಲಿ ಅನುಮಾನ ಮೂಡಿಸಿದ ಕಾರಣ ಐಸಿಸಿ 14 ದಿನದೊಳಗೆ ಪರೀಕ್ಷೆ ಒಳಪಡುವಂತೆ ಸೂಚಿಸಿತ್ತು. ಆದರೆ ಸತತ ಸರಣಿಯಿಂದ ರಾಯುಡು ಪರೀಕ್ಷೆ ಒಳಪಟ್ಟಿರಲಿಲ್ಲ. ಹೀಗಾಗಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ನಿರ್ಬಂಧ ಹೇರಿದೆ.

ಇದನ್ನೂ ಓದಿ: ಕ್ರಿಕೆಟಿಗನ ನಿಂದಿಸಿದ ಪಾಕಿಸ್ತಾನ ನಾಯಕ ಸರ್ಫರಾಜ್ ಅಮಾನತು!

ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು 2 ಓವರ್‌ ಬೌಲಿಂಗ್‌ ಮಾಡಿದ್ದರು. ಅವರ ಬೌಲಿಂಗ್‌ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪಂದ್ಯದ ಅಧಿಕಾರಿಗಳು, ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ವರದಿ ಮಾಡಿದ್ದಾರೆ. ತಮ್ಮ 50 ಏಕದಿನ ಪಂದ್ಯಗಳ ವೃತ್ತಿ ಬದುಕಿನಲ್ಲಿ ಕೇವಲ 20.1 ಓವರ್‌ ಬೌಲ್‌ ಮಾಡಿರುವ ರಾಯುಡು 3 ವಿಕೆಟ್‌ ಕಬಳಿಸಿದ್ದಾರೆ. ತಾವಾಡಿರುವ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅವರು ಒಮ್ಮೆಯೂ ಬೌಲಿಂಗ್‌ ಮಾಡಿಲ್ಲ.