ದುಬೈ(ಜ.29): ಐಸಿಸಿ ಪುರುಷರ ಹಾಗೂ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ 2ನೇ ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಇಂಗ್ಲೆಂಡ್, ಸೌತ್ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ತಂಡಗಳಿವೆ.

 

 

ಇದನ್ನೂ ಓದಿ: ಕಿವೀಸ್ ವಿರುದ್ಧದ 3ನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು- ಭಾರತಕ್ಕೆ ಏಕದಿನ ಸರಣಿ!

2020ರ ಆಕ್ಟೋಬರ್ 24 ರಿಂದ ನವೆಂಬರ್ 15 ರ ವರೆಗೆ ಪುರುಷರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ನವೆಂಬರ್ 11, 12 ರಂದು 2 ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಇನ್ನು ಫೈನಲ್ ಪಂದ್ಯ ನವೆಂಬರ್ 15 ರಂದು ನಡೆಯಲಿದೆ.  ಇದಕ್ಕೂ ಮುನ್ನ ಅಕ್ಟೋಬರ್ 18 ರಿಂದ 23ರ ವರೆಗೆ ಪುರುಷರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. 

ಇದನ್ನೂ ಓದಿ: ಐಪಿಎಲ್’ನ ಚಾಂಪಿಯನ್ ತಂಡ ಖರೀದಿಸಲು ಮುಂದಾದ ಬಚ್ಚನ್ ಕುಟುಂಬ..!

ಮಹಿಳಾ ವಿಶ್ವಕಪ್ ಟೂರ್ನಿ ಫೆಬ್ರವರಿ 21 ರಿಂದ ಮಾರ್ಚ್ 8 ವರೆಗೆ ನಡೆಯಲಿದೆ. ಭಾರತ ಮಹಿಳಾ ತಂಡ ಗ್ರೂಪ್ ಎನಲ್ಲಿದೆ. ಈ ಗುಂಪಿನಲ್ಲಿ ಆಸ್ಟ್ರೇಲಿಯಾ,ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಒಂದು ಅರ್ಹತೆ ಪಡೆಯುತ ತಂಡ ಇರಲಿದೆ.