ಶುಕ್ರವಾರ ಇಲ್ಲಿ ನಡೆದ ನೆದರ್‌ಲೆಂಡ್ಸ್ ವಿರುದ್ಧ 2ನೇ ಪಂದ್ಯವನ್ನು ಕೊನೆ ಎಸೆತದಲ್ಲಿ 1 ರನ್‌ನಿಂದ ಗೆದ್ದುಕೊಂಡಿತು. 

ಆಮ್ಸ್‌ಟೆಲ್ವಿನ್[ಆ.03]: 3 ದಿನಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನೇಪಾಳ ತಂಡ, ಚೊಚ್ಚಲ ಗೆಲುವಿನ ಸಿಹಿಯುಂಡಿದೆ. 

ಶುಕ್ರವಾರ ಇಲ್ಲಿ ನಡೆದ ನೆದರ್‌ಲೆಂಡ್ಸ್ ವಿರುದ್ಧ 2ನೇ ಪಂದ್ಯವನ್ನು ಕೊನೆ ಎಸೆತದಲ್ಲಿ 1 ರನ್‌ನಿಂದ ಗೆದ್ದುಕೊಂಡಿತು. ಕೊನೆ ಎಸೆತದಲ್ಲಿ ನೆದರ್‌ಲೆಂಡ್ಸ್ ಜಯಕ್ಕೆ 2 ರನ್ ಬೇಕಿದ್ದವು. ಆದರೆ ರನೌಟ್ ಮಾಡುವ ಮೂಲಕ, ನೇಪಾಳ ಜಯ ಕಸಿದುಕೊಂಡಿತು. ಇದರೊಂದಿಗೆ 2 ಪಂದ್ಯಗಳ ಸರಣಿ 1-1ರಲ್ಲಿ ಡ್ರಾಗೊಂಡಿತು.

Scroll to load tweet…

ಸಂದೀಪ್ ಲೆಮಿಚ್ಚಾನೆ ಮೂರು ವಿಕೆಟ್ ಪಡೆದು ನೇಪಾಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸಂಕ್ಷಿಪ್ತ ಸ್ಕೋರ್: ನೇಪಾಳ 216, ನೆದರ್‌ಲೆಂಡ್ಸ್ 215