ಮುಂಬೈ(ಮಾ.09): ತಾರಾ ಆಟಗಾರ್ತಿ ವಿ.ಆರ್‌. ವನಿತಾ (51 ಎಸೆತಗಳಲ್ಲಿ 84 ರನ್‌) ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಕರ್ನಾಟಕ, ರಾಷ್ಟ್ರೀಯ ಮಹಿಳಾ ಟಿ20 ಸೂಪರ್‌ ಲೀಗ್‌ ಹಂತದ ತನ್ನ 3ನೇ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. 

ಇದನ್ನೂ ಓದಿ: ಮುಷ್ತಾಕ್‌ ಅಲಿ ಟಿ20: ಕರ್ನಾಟಕದ ಅಬ್ಬರಕ್ಕೆ ಮುಂಬೈ ಮಂಕು!

ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಕರ್ನಾಟಕ ತಂಡದ ಫೈನಲ್‌ ಪ್ರವೇಶ ಬಹುತೇಕ ಖಚಿತವಾಗಿದೆ. ‘ಬಿ’ ಗುಂಪಿನಲ್ಲಿರುವ ಕರ್ನಾಟಕ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಾ.11 ರಂದು ಕರ್ನಾಟಕ ಅಸ್ಸಾಂ ವಿರುದ್ಧ ಕೊನೆಯ ಪಂದ್ಯದಲ್ಲಿ ಆಡಲಿದೆ. ಹಿಮಾಚಲ ನೀಡಿದ್ದ 134 ರನ್‌ ಗುರಿಯನ್ನು ಕರ್ನಾಟಕ ಇನ್ನೂ 10 ಎಸೆತ ಬಾಕಿ ಇರುವಂತೆ ತಲುಪಿತು.

ಇದನ್ನೂ ಓದಿ: ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ - ನಿರ್ಧಾರ ಪ್ರಕಟಿಸಿದ ಆಸಿಸ್ ಮಂಡಳಿ!

ಸ್ಕೋರ್‌: ಹಿಮಾಚಲ 133/3, ಕರ್ನಾಟಕ 134/4