ಮೆಲ್ಬೋರ್ನ್(ಮಾ.08): ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ಶಿಕ್ಷೆ ಮುಗಿಸಿ ಹೊರಬರಲು ಸಜ್ಜಾಗಿದ್ದಾರೆ. ಮಾ.28ಕ್ಕೆ ಸ್ಮಿತ್ ಹಾಗೂ ವಾರ್ನರ್ ನಿಷೇಧ ಶಿಕ್ಷೆ ಅಂತ್ಯವಾಗಲಿದೆ. 

ಇದನ್ನೂ ಓದಿ: ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!

ನಿಷೇಧ ಶಿಕ್ಷೆ ಅಂತ್ಯಗೊಳ್ಳಲು ಕೆಲ ದಿನಗಳಿರುವಾಗಲೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಉಭಯ ಕ್ರಿಕೆಟಿಗರ ಐಪಿಎಲ್ ಟೂರ್ನಿ ಭವಿಷ್ಯ ನಿರ್ಧರಿಸಿದೆ. ಸ್ಮಿತ್ ಹಾಗೂ ವಾರ್ನರ್ ಇಬ್ಬರೂ ಐಪಿಎಲ್ ಟೂರ್ನಿ ಆಡಲಿದ್ದಾರೆ ಎಂದು ಆಸಿಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: IPL 12: ಥೀಮ್ ಸಾಂಗ್ ರಿಲೀಸ್..! ಪ್ರೇಕ್ಷಕರು ಫುಲ್ ಖುಷ್..!

ಪಾಕಿಸ್ತಾನ ವಿರುದ್ದದ 5 ಪಂದ್ಯಗಳ ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟಿಸಲಾಗಿದೆ. ಆದರೆ ಸ್ಮಿತ್ ಹಾಗೂ ವಾರ್ನರ್‌ಗೆ ಅವಕಾಶ ನೀಡಿಲ್ಲ. ಆದರೆ ಇವರಿಬ್ಬರೂ ಐಪಿಎಲ್‌ಗೆ ಲಭ್ಯರಿದ್ದಾರೆ ಎಂದಿದೆ. ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದಾರಾಬಾದ್ ತಂಡದ ನಾಯಕನಾಗಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಐಪಿಎಲ್ ಟೂರ್ನಿ ಮೂಲಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ 2019ರ ವಿಶ್ವಕಪ್ ತಂಡಕ್ಕೂ ಆಯ್ಕೆಯಾಗೋ ಗುರಿ ಇಟ್ಟುಕೊಂಡಿದ್ದಾರೆ.