ಬೆಂಗಳೂರು(ಫೆ.05): ಫೆಬ್ರವರಿ 6 ರಿಂದ 10ರವರೆಗೆ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ 141 ಅಥ್ಲೀಟ್‌ಗಳ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಅಂಡರ್‌ 14, 16, 18 ಹಾಗೂ 20 ವಯೋಮಿತಿಯ ಅಥ್ಲೀಟ್‌ಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಕಾರ‍್ಯದರ್ಶಿ ಎ.ರಾಜವೇಲು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

4 ವಿಭಾಗಗಳಿಂದ ಸುಮಾರು 1600 ಕ್ರೀಡಾಪಟುಗಳು ರಾಷ್ಟ್ರೀಯ ಅಥ್ಲೇಟಿಕ್ಸ್‌ ಚಾಂಪಿಯನ್‌ಶಿಪ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ಅಂದಾಜಿಸಿದ್ದಾರೆ. 

ಬಾಕ್ಸಿಂಗ್‌: ಮಂಜೇಗೌಡ ಜಂಟಿ ಕಾರ‍್ಯದರ್ಶಿ

ಬೆಂಗಳೂರು: ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ದಕ್ಷಿಣ ವಲಯದ ಜಂಟಿ ಕಾರ‍್ಯದರ್ಶಿಯಾಗಿ ಕರ್ನಾಟಕದ ಡಾ. ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಕ್ಸಿಂಗ್‌ ಇತಿಹಾಸದಲ್ಲಿ ರಾಜ್ಯದ ವ್ಯಕ್ತಿಯೊಬ್ಬರು ಜಂಟಿ ಕಾರ‍್ಯದರ್ಶಿಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಮಂಜೇಗೌಡಗೆ, ಕರ್ನಾಟಕ ಬಾಕ್ಸಿಂಗ್‌ ಸಂಸ್ಥೆ ಪದಾಧಿಕಾರಿಗಳು ಶುಭ ಕೋರಿದ್ದಾರೆ.