ಮುಂಬೈ(ಮಾ.24): ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿದೆ. ಕೇವಲ 18 ಎಸೆತಕ್ಕೆ ಹಾಫ್ ಸೆಂಚುರಿ ಸಿಡಿಸಿದ ಪಂತ್ 27 ಎಸೆತದಲ್ಲಿ ಅಜೇಯ 78 ರನ್ ಚಚ್ಚಿದರು. ಈ ಮೂಲಕ 12ನೇ ಆವೃತ್ತಿಯಲ್ಲಿ 200 ರನ್ ಗಡಿ ದಾಟಿದ ಮೊದಲ ತಂಡ ಅನ್ನೋ ಹೆಗ್ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾತ್ರವಾಯಿತು. 

ಇದನ್ನೂ ಓದಿ: IPL 2019: ಮುಂಬೈ VS ಡೆಲ್ಲಿ ಪಂದ್ಯಕ್ಕೆ ವಿಶೇಷ ಅತಿಥಿ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಪೃಥ್ವಿ ಶಾ 7 ರನ್ ಸಿಡಿಸಿ ಔಟಾದರು. ಶಿಖರ್ ಧವನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೊತೆ ಯಾಟದಿಂದ ಡೆಲ್ಲಿ ಚೇತರಿಸಿಕೊಂಡಿತು. ಆದರೆ ಶ್ರೇಯಸ್ ಅಯ್ಯರ್ 16 ರನ್ ಸಿಡಿಸಿ ಔಟಾದರು.

ಧವನ್ ಜೊತೆ ಸೇರಿದ ಕೊಲಿನ್ ಇನ್‌ಗ್ರಾಂ ಡೆಲ್ಲಿ ತಂಡಕ್ಕೆ ಆಸರೆಯಾದರು. ಇನ್‌ಗ್ರಾಂ 32 ಎಸೆತದಲ್ಲಿ 47 ರನ್ ಸಿಡಿಸಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಧವನ್, ಬಳಿಕ ಅಬ್ಬರಿಸಿದರು. 36 ಎಸೆತದಲ್ಲಿ 43 ರನ್ ಸಿಡಿಸಿದರು.  

ಇದನ್ನೂ ಓದಿ: IPL 2019: ಕೋಲ್ಕತಾದಲ್ಲಿ 'ರಸಲ್' ಮೇನಿಯಾ- SRH ಬಗ್ಗು ಬಡಿದ KKR!

ರಿಷಬ್ ಪಂತ್ ಆಗಮನದ ಬಳಿಕ ಡೆಲ್ಲಿ ತಂಡ ರನ್ ವೇಗ ಹೆಚ್ಚಾಯಿತು. ಬೌಂಡರಿ  ಸಿಕ್ಸರ್‌ಗಳ ಅಬ್ಬರ ಶುರುವಾಯಿತು. ಜಸ್ಪ್ರೀತ್ ಬುಮ್ರಾ ಯಾರ್ಕರ್ ಎಸೆತಕ್ಕೆ ಧೋನಿ ರೀತಿ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿ ಗಮನಸೆಳೆದರು. ಕೇವಲ 18 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಅತೀ ವೇಗದಲ್ಲಿ ಅರ್ಧಶತಕ ಸಿಡಿಸಿದ ಡೆಲ್ಲಿ ತಂಡ 2ನೇ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದರು. 

ಪಂತ್ ಎಸೆತದಲ್ಲಿ ಅಜೇಯ 78 ರನ್ ಸಿಡಿಸಿದರೆ ರಾಹುಲ್ ಟಿವಾಟಿಯಾ ಅಜೇಯ 9 ರನ್ ದಾಖಲಿಸಿದರು. ಈ ಮೂಲಕ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 213ರನ್ ಸಿಡಿಸಿತು.  ಮುಂಬೈ ಇಂಡಿಯನ್ಸ್ ಗೆಲುವಿಗೆ 214 ರನ್ ಬೇಕಿದೆ.