ಮುಂಬೈ(ಮಾ.24): ಐಪಿಎಲ್ 12ನೇ ಆವೃತ್ತಿ ಕಾವು ಜೋರಾಗುತ್ತಿದೆ. ಸೂಪರ್ ಸಂಡೆಯ 2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸುತ್ತಿದೆ. ಈ ಪಂದ್ಯ ವೀಕ್ಷಿಸಲು ರೋಹಿತ್ ಶರ್ಮಾ ಮುದ್ದು ಮಗಳು ಸಮೈರಾ ಹಾಗೂ ಪತ್ನಿ ಆಗಮಿಸಿದ್ದಾರೆ.

ಇದನ್ನೂ ಓದಿ: ಮಗಳ ಜೊತೆ ಗಲ್ಲಿ ಬಾಯ್ ಸಾಂಗ್ ಹಾಡಿದ ರೋಹಿತ್ ಶರ್ಮಾ

ರೋಹಿತ ಶರ್ಮಾ ಪತ್ನಿ ರಿತಿಕಾ ಸಾಜ್ದೆ 3 ತಿಂಗಳ ಮಗುವಿನ ಜೊತೆ ಮುಂಬೈ ಇಂಡಿಯನ್ಸ್ ಹಾಗೂ ಡೆಲಿಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ವೀಕ್ಷಿಸಲು ಆಗಮಿಸಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ರೋಹಿತ್ ಮಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದಾಳೆ. 

 

 

ಇದನ್ನೂ ಓದಿ: IPL 2019: ಕೋಲ್ಕತಾದಲ್ಲಿ 'ರಸಲ್' ಮೇನಿಯಾ- SRH ಬಗ್ಗು ಬಡಿದ KKR!

ಡಿಸೆಂಬರ್ 31ಕ್ಕೆ ರೋಹಿತ್ ಪತ್ನಿ ರಿತಿಕಾ ಸಾಜ್ದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ರೋಹಿತ್ ಶರ್ಮಾ ಸರಣಿ ಅರ್ಧಕ್ಕೆ ಮೊಟಕುಗೊಳಿಸಿ ದಿಢೀರ್ ತವರಿಗೆ ವಾಪಾಸ್ಸಾಗಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು.