ಆರಂಭಿಕರಾದ ಸೂರ್ಯಕುಮಾರ್ ಯಾದವ್ ಹಾಗೂ ಎವಿನ್ ಲೆವಿಸ್ ಮೊದಲ ವಿಕೆಟ್’ಗೆ 9.2 ಓವರ್’ಗಳಲ್ಲಿ 91 ರನ್ ಕಲೆ ಹಾಕಿತು. 

ಮುಂಬೈ[ಮೇ.06]: ಸೂರ್ಯಕುಮಾರ್ ಯಾದವ್[59] ಆಕರ್ಷಕ ಅರ್ಧಶತಕ ಹಾಗೂ ಎವಿನ್ ಲೆವಿಸ್ ಸ್ಫೋಟಕ[43] ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್’ಗೆ 182 ರನ್’ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕರಾದ ಸೂರ್ಯಕುಮಾರ್ ಯಾದವ್ ಹಾಗೂ ಎವಿನ್ ಲೆವಿಸ್ ಮೊದಲ ವಿಕೆಟ್’ಗೆ 9.2 ಓವರ್’ಗಳಲ್ಲಿ 91 ರನ್ ಕಲೆ ಹಾಕಿತು. ಈ ಇಬ್ಬರು ಬ್ಯಾಟ್ಸ್’ಮನ್’ಗಳನ್ನು ಆ್ಯಂಡ್ರೆ ರೆಸಲ್ ಪೆವಿಲಿಯನ್’ಗೆ ಕಳಿಸಿದರು. ಇನ್ನು ರೋಹಿತ್ ಶರ್ಮಾ 11, ಕೃನಾಲ್ ಪಾಂಡ್ಯ 14 ಹಾಗೂ ಹಾರ್ದಿಕ್ ಪಾಂಡ್ಯ 35* ಮತ್ತು ಡುಮಿನಿ 13* ಅಜೇಯ ಆಟವಾಡುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ಕೆಕೆಆರ್ ಪರ ರೆಸಲ್ ಹಾಗೂ ನರೈನ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: 
ಕೆಕೆಆರ್: 181/4
ಸೂರ್ಯಕುಮಾರ್ ಯಾದವ್: 59
ರಸೆಲ್: 12/2
[* ವಿವರ ಅಪೂರ್ಣ]