ಹೈದರಾಬಾದ್‌(ಮೇ.14): ಐಪಿಎಲ್‌ ಫೈನಲ್‌ ಗೆದ್ದ ಬಳಿಕ ಮುಂಬೈ ಇಂಡಿಯನ್ಸ್‌ ಆಟಗಾರರು, ‘ಕ್ರಿಕೆಟ್‌ ದೇವರು’ ಸಚಿನ್‌ ತೆಂಡುಲ್ಕರ್‌ ಜತೆ ಫೋಟೋ ತೆಗಿಸಿಕೊಳ್ಳಲು ಮುಗಿಬಿದ್ದರು. ಡ್ರೆಸ್ಸಿಂಗ್‌ ಕೊಠಡಿಯಲ್ಲಿ ತಂಡದ ‘ಐಕಾನ್‌’ ಆಗಿರುವ ಸಚಿನ್‌ ಜತೆ ಬಹುತೇಕ ಆಟಗಾರರು ಫೋಟೋ ತೆಗಿಸಿಕೊಂಡಿದ್ದಲ್ಲದೇ, ಜೆರ್ಸಿ ಮೇಲೆ ಆಟೋಗ್ರಾಫ್‌ ಹಾಕಿಸಿಕೊಂಡರು. ಈ ವಿಡಿಯೋವನ್ನು ಮುಂಬೈ ತಂಡ ತನ್ನ ಟ್ವೀಟರ್‌ ಖಾತೆಯಲ್ಲಿ ಹಾಕಿದ್ದು, ವಿಡಿಯೋ ವೈರಲ್‌ ಆಗಿದೆ.

 

 

ಇದನ್ನೂ ಓದಿ: ಆರೇಂಜ್ ಕ್ಯಾಪ್ to ಫೇರ್ ಪ್ಲೇ: 2019ರ IPL ಪ್ರಶಸ್ತಿ ಗೆದ್ದ ಕ್ರಿಕೆಟರ್ಸ್!

12ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಡಿತ್ತು. ರೋಚಕ ಹೋರಾಟದಲ್ಲಿ ಮುಂಬೈ 1 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಅಂತಿಮ ಎಸೆತದಲ್ಲಿ ವಿಕೆಟ್ ಕಬಳಿಸೋ ಮೂಲಕ ಮುಂಬೈ ಇಂಡಿಯನ್ಸ್ 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು.