Asianet Suvarna News Asianet Suvarna News

ವಿಂಡೀಸ್ ಪ್ರವಾಸಕ್ಕೆ ಗೈರು; ಭಾರತೀಯ ಸೇನೆಗೆ ಧೋನಿ ಹಾಜರ್!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಮುಂದಿನ 2 ತಿಂಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ವೆಸ್ಟ್ ಇಂಡೀಸ್ ಪ್ರವಾಸದಿಂದಲೂ ಹಿಂದೆ ಸರಿದಿದ್ದಾರೆ. ಧೋನಿ ಅಲಭ್ಯತೆ ಹಾಗೂ ನಿವೃತ್ತಿ ಕುರಿತು ಬಿಸಿಸಿಐ ಸ್ಪಷ್ಟಪಡಿಸಿದೆ.

MS dhoni will serve next 2 months in Parachute Regiment of Territorial Army
Author
Bengaluru, First Published Jul 20, 2019, 3:19 PM IST

ರಾಂಚಿ(ಜು.20): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿ ಸದ್ಯಕ್ಕಿಲ್ಲ ಅನ್ನೋದು ಸ್ಪಷ್ಟವಾಗಿದೆ. ಆದರೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಲಭ್ಯರಿಲ್ಲ. ಮುಂದಿನ 2 ತಿಂಗಳು ಧೋನಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಈಗಾಗಲೇ ಪ್ಯಾರಾ ರೆಜಿಮೆಂಟ್ ಟೆರಿಟೋರಿಯಲ್ ತರಬೇತಿ ಮುಗಿಸಿರುವ ಧೋನಿ ಇದೀಗ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆ ಲಾಂಛನ-ಟ್ವಿಟರಿಗರಿಂದ ಸಲ್ಯೂಟ್!

ಪ್ಯಾರಾಚ್ಯೂಟ್ ರಿಜಿಮೆಂಟ್ ವಿಭಾಗದಲ್ಲಿ ಧೋನಿ ಲಿಫ್ಟಿನೆಂಟ್ ಕೊಲೊನೆಲ್ ಗೌರವ ಹುದ್ದೆ ಹೊಂದಿದ್ದಾರೆ. ಮುಂದಿನ 2 ತಿಂಗಳು ಪ್ಯಾರಾಚ್ಯೂಟ್ ರಿಜಿಮೆಂಟ್ ಟಿರಿಟೋರಿಯಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಲಭ್ಯವಿಲ್ಲ ಎಂದು ಧೋನಿ ಬಿಸಿಸಿಐಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

ಧೋನಿ ಅಲಭ್ಯತೆ ಕುರಿತು ಬಿಸಿಸಿಐ ಸ್ಪಷ್ಟಪಡಿಸಿದೆ. ಧೋನಿ ನಿವೃತ್ತಿ ಸದ್ಯಕ್ಕಿಲ್ಲ, ವಿಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ವಿಶ್ವಕಪ್ ಟೂರ್ನಿ ಬಳಿಕ ಧೋನಿ ಮ್ಯಾನೇಜರ್ ಅರುಣ್ ಪಾಂಡೆ, MSD ನಿವೃತ್ತಿ ಕುರಿತು ಯಾವುದೇ ಖಚಿತತೆ ಇಲ್ಲ. ಆದರೆ ನಿವೃತ್ತಿ ಬಳಿಕ ಸೇನೆ ಸೇರಿಕೊಳ್ಳಲಿದ್ದಾರೆ ಎಂದಿದ್ದರು. 

Follow Us:
Download App:
  • android
  • ios