MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಹಲವರು ಕ್ರಿಕೆಟಿಗರು ಭಾಗಿ

ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಹಲವರು ಕ್ರಿಕೆಟಿಗರು ಭಾಗಿ

ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಖಾಸಗಿ ಕಾರ್ಯಕ್ರಮದಲ್ಲಿ ಧವನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ತೀವ್ರವಾಗಿ ಕುಗಿದ್ದ ಧವನ್ ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. 

1 Min read
Author : Chethan Kumar
Published : Feb 21 2026, 10:36 PM IST
Share this Photo Gallery
  • FB
  • TW
  • Linkdin
  • Whatsapp
15
ಶಿಖರ್ ಧವನ್ ಅದ್ಧೂರಿ ಮದುವೆ
Image Credit : Shikhar Dhawan Sophie Shine insta

ಶಿಖರ್ ಧವನ್ ಅದ್ಧೂರಿ ಮದುವೆ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಕ್ರಿಕೆಟ್ ಕರಿಯರ್‌ನಲ್ಲೂ ಸಾಕಷ್ಟು ಹೋರಾಟ ಮಾಡಿದ್ದಾರೆ. ಇಂಜುರಿ, ಕಳಪೆ ಫಾರ್ಮ್‌ಗಳಿಂದ ತಂಡದಿಂದ ಹೊರಬಿದ್ದರೂ ಮತ್ತೆ ಕಮ್‌ಬ್ಯಾಕ್ ಮಾಡಿ ಮಿಂಚಿದ್ದಾರೆ. ಧವನ್ ವೈಯುಕ್ತಿಕ ಬದುಕು ಹೋರಾಟಗಳಿಂದಲೇ ಕೂಡಿತ್ತು. ಮೊದಲ ಮದುವೆ ಮುರಿದು ಬಿದ್ದ ಬಳಿಕ ಮಗನ ನೆನೆದು ತೀವ್ರವಾಗಿ ಕುಗ್ಗಿ ಹೋಗಿದ್ದ ಶಿಖರ್ ಧವನ್ ಇದೀಗ ಬಹುಕಾಲದ ಗೆಳತಿ ಸೋಫಿ ಶೈನ್ ಜೊತೆ ಸಪ್ತಪದಿ ತುಳಿದಿದ್ದಾರೆ.

25
ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಿಖರ್ ಧವನ್ ಸೋಫಿ ಶೈನ್
Image Credit : Shikhar Dhawan insta

ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಿಖರ್ ಧವನ್ ಸೋಫಿ ಶೈನ್

ಖಾಸಗಿ ಕಾರ್ಯಕ್ರಮದಲ್ಲಿ ಶಿಖರ್ ಧವನ್, ಸೋಫಿ ಶೈನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರ 12ರಂದು ಈ ಜೋಡಿ ತಮ್ಮ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇವರಿಬ್ಬರು ತಮ್ಮ ರಿಲೇಶನ್‌ಶಿಪ್‌ನ್ನು 2025ರ ಮೇ ತಿಂಗಳಲ್ಲ ಅಧಿಕೃಗೊಳಿಸಿದ್ದರು.

Related Articles

Related image1
ಶಿಖರ್ ಧವನ್ ಮದುವೆಯಾಗಲಿರುವ ಸೋಫಿ ಶೈನ್ ಯಾರು? ಈಕೆ ಹಿನ್ನಲೆ ಏನು?
Related image2
ಮಗನ ಜೊತೆ ಕಾಂಟ್ಯಾಕ್ಟ್ ನಲ್ಲೇ ಇಲ್ಲ: ಫಾದರ್ಸ್ ಡೇ ದಿನ Shikhar Dhawan ಸಂಕಟ..!
35
ಹಲವು ಕ್ರಿಕೆಟಿಗರು ಭಾಗಿ
Image Credit : Shikhar Dhawan insta

ಹಲವು ಕ್ರಿಕೆಟಿಗರು ಭಾಗಿ

ಶಿಖರ್ ಧವನ್ ಎರಡನೇ ಮದುವೆಗೆ ಟೀಂ ಇಂಡಿಯಾ ಕೆಲ ಆಪ್ತ ಕ್ರಿಕೆಟಿಗರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಶಿಖರ್ ಧವನ್ , ಸೋಫಿ ಶೈನ್ ಕುಟುಂಬಸ್ಥರು ಸೇರಿದಂತೆ ಆಪ್ತರು ಮಾತ್ರ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸ್ಪಿನ್ನರ್ ಯಜುವೇಂದ್ರ ಚಹಾಲ್ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.

45
ಫೆಬ್ರವರಿ 20 ಹಳದಿ ಸೆರೆಮನಿ
Image Credit : Shikhar Dhawan insta

ಫೆಬ್ರವರಿ 20 ಹಳದಿ ಸೆರೆಮನಿ

ಶಿಖರ್ ಧವನ್ ಹಾಗೂ ಸೋಫಿ ಶೈನ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಫೆಬ್ರವರಿ 20 ರಂದು ಹಳದಿ ಕಾರ್ಯಕ್ರಮ ನಡೆದಿತ್ತು. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಶಿಖರ್ ಮದುವೆ ಸಂಭ್ರಮದಲ್ಲಿದ್ದಾರೆ.

55
ಯಾರು ಈ ಸೋಫಿ ಶೈನ್
Image Credit : Shikhar Dhawan insta

ಯಾರು ಈ ಸೋಫಿ ಶೈನ್

ಸೋಫಿ ಶೈನ್ ಪ್ರಮುಖ ಹುದ್ದೆ ಹೊಂದಿದ್ದಾರೆ. ಐರಿಶ್ ಕಂಪನಿಯಲ್ಲಿ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕ ಮೂಲದ ನಾರ್ಥರ್ನ್ ಟ್ರಸ್ಟ್ ಕಾರ್ಪೋರೇಶನ್ ಕಂಪನಿಯಲ್ಲಿ ಪ್ರಾಡಕ್ಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಖರ್ ಧವನ್ ಮೊದಲು ಸೋಫಿ ಶೈನ್ ಭೇಟಿಯಾಗಿದ್ದು ಯುಎಐನಲ್ಲಿ. ಸೋಫಿ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.

ಯಾರು ಈ ಸೋಫಿ ಶೈನ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಶಿಖರ್ ಧವನ್
ಮದುವೆ
ಕ್ರಿಕೆಟ್
ಟೀಮ್ ಇಂಡಿಯಾ

Latest Videos
Recommended Stories
Recommended image1
ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ
Recommended image2
ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!
Recommended image3
ಟಿ20 ವಿಶ್ವಕಪ್‌ನಲ್ಲಿ ಸತತ 3 ಸೊನ್ನೆ ಸುತ್ತಿದ್ದು ಅಭಿಷೇಕ್‌ ಮಾತ್ರವಲ್ಲ ಇನ್ನೊಬ್ಬ ಭಾರತೀಯನೂ ಇದ್ದಾನೆ! ಆತ ಯಶಸ್ವಿ ಕೋಚ್!
Related Stories
Recommended image1
ಶಿಖರ್ ಧವನ್ ಮದುವೆಯಾಗಲಿರುವ ಸೋಫಿ ಶೈನ್ ಯಾರು? ಈಕೆ ಹಿನ್ನಲೆ ಏನು?
Recommended image2
ಮಗನ ಜೊತೆ ಕಾಂಟ್ಯಾಕ್ಟ್ ನಲ್ಲೇ ಇಲ್ಲ: ಫಾದರ್ಸ್ ಡೇ ದಿನ Shikhar Dhawan ಸಂಕಟ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved