MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ

ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ

ಅಭಿಷೇಕ್ ಶರ್ಮಾ ಬದಲು ಟೀಂ ಇಂಡಿಯಾ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್? ಕ್ಯಾಪ್ಟನ್ ಉತ್ತರ, ಕ್ಯಾಪ್ಟನ್ ಕೊಟ್ಟ ಉತ್ತರ ಏನು, ಶರ್ಮಾ ಕಳಪೆ ಫಾರ್ಮ್‌ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಖಡಕ್ ಉತ್ತರ ನೀಡಿದ್ದಾರೆ. 

2 Min read
Author : Chethan Kumar
Published : Feb 21 2026, 08:06 PM IST
Share this Photo Gallery
  • FB
  • TW
  • Linkdin
  • Whatsapp
15
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್
Image Credit : Getty

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಕಳೆದ ಮೂರು ಪಂದ್ಯಗಳಲ್ಲಿ ಕಳಪೆ ಫಾರ್ಮ್ ಎದುರಿಸಿದ್ದಾರೆ.ಹೀಗಾಗಿ ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್ ತಂಡ ಸೇರಿಕೊಳ್ಳಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೂಪರ್ 8 ಹಂತದ ಪಂದ್ಯಕ್ಕೂ ಮೊದಲು ಸೂರ್ಯಕುಮಾರ್ ಯಾದವ್ ಈ ಕುರಿತು ಮಾತುಗಳಿಗೆ ಖಡಕ್ ಉತ್ತರ ನೀಡಿದ್ದಾರೆ

25
ಅಭಿಷೇಕ್ ಶರ್ಮಾ ಬೆಂಬಲಕ್ಕೆ ನಿಂತ ಸೂರ್ಯ
Image Credit : ANI

ಅಭಿಷೇಕ್ ಶರ್ಮಾ ಬೆಂಬಲಕ್ಕೆ ನಿಂತ ಸೂರ್ಯ

ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ನಮಗೇನೂ ಚಿಂತೆ ಇಲ್ಲ ಎಂದು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದ್ದಾರೆ. 2026ರ ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯಗಳು ಆರಂಭವಾಗುವ ಮುನ್ನ ಅಹ್ಮದಾಬಾದ್‌ನಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡು ವೇಳೆ ಸ್ಪಷ್ಟನೆ ನೀಡಿದ್ದಾರೆ. ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ, ತಮ್ಮ ಓಪನರ್‌ಗೆ ಕ್ಯಾಪ್ಟನ್ ಪೂರ್ಣ ಬೆಂಬಲ ಘೋಷಿಸಿದ್ದಾರೆ. ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲೂ ಅಭಿಷೇಕ್ ರನ್ ಗಳಿಸಲು ವಿಫಲರಾಗಿದ್ದರು.

Related Articles

Related image1
'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು': ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?
Related image2
ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್
35
ನಿಮಗೆ ಯಾಕೆ ಟೆನ್ಶನ್
Image Credit : Getty

ನಿಮಗೆ ಯಾಕೆ ಟೆನ್ಶನ್

ಅಭಿಷೇಕ್ ಶರ್ಮಾ ಫಾರ್ಮ್ ಬಗ್ಗೆ ನಮಗೆ ಯಾವುದೇ ಆತಂಕ ಇಲ್ಲ. ಅಭಿಷೇಕ್ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡವರನ್ನು ನೋಡಿದ್ರೆ ನಂಗೆ ಬೇಜಾರಾಗುತ್ತೆ. ಇದು ಟೀಮ್ ಗೇಮ್. ಕಳೆದ ವರ್ಷ ಅಭಿಷೇಕ್ ತಂಡವನ್ನ ಹೆಗಲ ಮೇಲೆ ಹೊತ್ತಿದ್ದ. ಈಗ ನಾವು ಅವನ ಪರ ನಿಲ್ಲುತ್ತೇವೆ" ಎಂದು ಸೂರ್ಯ ಹೇಳಿದರು. ಇದೇ ವೇಳೆ, 'ಸಂಜು ಸ್ಯಾಮ್ಸನ್ ತಂಡಕ್ಕೆ ಬರುತ್ತಾರಾ?' ಎಂಬ ಪ್ರಶ್ನೆಗೂ ಸೂರ್ಯಕುಮಾರ್ ಉತ್ತರಿಸಿದ್ದಾರೆ. ದೊಡ್ಡ ಸ್ಕೋರ್ ಮಾಡಲು ತಂಡ ಪ್ರಯತ್ನಿಸುತ್ತಿದೆ. ಅಭಿಷೇಕ್ ಮತ್ತು ತಿಲಕ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಬೆಂಬಲ ನೀಡುತ್ತಿದೆ. ಇವರಲ್ಲಿ ಯಾರನ್ನು ಬದಲಿಸುವುದು? ತಂಡ ಗೆಲ್ಲುತ್ತಲೇ ಇದೆ, ಹಾಗಿದ್ದಾಗ ತಂಡವನ್ನು ಯಾಕೆ ಬದಲಿಸಬೇಕು? ಈ ವಿಶ್ವಕಪ್‌ನಲ್ಲಿ ಪಿಚ್‌ಗಳು ಸ್ವಲ್ಪ ವಿಭಿನ್ನವಾಗಿವೆ. ಸವಾಲುಗಳನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ" ಎಂದು ಸೂರ್ಯಕುಮಾರ್ ವಿವರಿಸಿದರು.

45
ಅಭಿಷೇಕ್ ಶರ್ಮಾ ಫಾರ್ಮ್
Image Credit : Getty

ಅಭಿಷೇಕ್ ಶರ್ಮಾ ಫಾರ್ಮ್

ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ 8 ಎಸೆತಗಳನ್ನು ಎದುರಿಸಿದ್ದರೂ ಒಂದೇ ಒಂದು ರನ್ ಗಳಿಸಿಲ್ಲ. ಅಮೆರಿಕ ವಿರುದ್ಧ ಅಲಿ ಖಾನ್ ಬೌಲಿಂಗ್‌ನಲ್ಲಿ ಔಟಾದರು. ಪಾಕಿಸ್ತಾನ ವಿರುದ್ಧ ಸಲ್ಮಾನ್ ಅಲಿ ಅಘಾ ಅವರ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ನೆದರ್ಲೆಂಡ್ಸ್ ವಿರುದ್ಧ ಆರ್ಯನ್ ದತ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅವರು ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ (ಅದೂ ಫೆಬ್ರವರಿ ತಿಂಗಳೊಳಗೆ) ಅತಿ ಹೆಚ್ಚು ಡಕ್‌ಗಳಿಗೆ ಔಟಾದ ಭಾರತೀಯ ಆಟಗಾರ ಎಂಬ ಕೆಟ್ಟ ದಾಖಲೆಯನ್ನೂ ಅಭಿಷೇಕ್ ಹಂಚಿಕೊಂಡಿದ್ದಾರೆ.

55
ಕೋಚ್ ಮೋರ್ಕೆಲ್ ಕೂಡ ಬೆಂಬಲ
Image Credit : Getty

ಕೋಚ್ ಮೋರ್ಕೆಲ್ ಕೂಡ ಬೆಂಬಲ

ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಕೂಡ ಅಭಿಷೇಕ್‌ಗೆ ಬೆಂಬಲ ನೀಡಿದ್ದಾರೆ. ಅಭಿಷೇಕ್ ಒಬ್ಬ ವಿಶ್ವದರ್ಜೆಯ ಆಟಗಾರ, ಅವರ ಫಾರ್ಮ್ ಬಗ್ಗೆ ತಂಡದೊಳಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಭಿಷೇಕ್ ರನ್ ಗಳಿಸದಿದ್ದರೂ, ಭಾರತ ಗ್ರೂಪ್ ಹಂತದ ನಾಲ್ಕೂ ಪಂದ್ಯಗಳನ್ನು ಗೆದ್ದಿದೆ ಎಂಬುದು ತಂಡದ ಬಲವನ್ನು ತೋರಿಸುತ್ತದೆ. 2025ರಲ್ಲಿ ಅಭಿಷೇಕ್ 21 ಪಂದ್ಯಗಳಿಂದ 193.46 ಸ್ಟ್ರೈಕ್ ರೇಟ್‌ನಲ್ಲಿ 859 ರನ್ ಚಚ್ಚಿದ್ದರು. ಅವರ ಈ ಹಿಂದಿನ ಪ್ರದರ್ಶನವನ್ನೇ ಗಮನದಲ್ಲಿಟ್ಟುಕೊಂಡು ತಂಡವು ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಾದರೂ ಅಭಿಷೇಕ್ ಫಾರ್ಮ್‌ಗೆ ಮರಳುತ್ತಾರೆ ಎಂದು ಅಭಿಮಾನಿಗಳು ಮತ್ತು ತಂಡ ನಿರೀಕ್ಷಿಸುತ್ತಿದೆ.

ಕೋಚ್ ಮೋರ್ಕೆಲ್ ಕೂಡ ಬೆಂಬಲ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸೂರ್ಯಕುಮಾರ್ ಯಾದವ್
ಟೀಮ್ ಇಂಡಿಯಾ
ಕ್ರಿಕೆಟ್

Latest Videos
Recommended Stories
Recommended image1
ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!
Recommended image2
ಟಿ20 ವಿಶ್ವಕಪ್‌ನಲ್ಲಿ ಸತತ 3 ಸೊನ್ನೆ ಸುತ್ತಿದ್ದು ಅಭಿಷೇಕ್‌ ಮಾತ್ರವಲ್ಲ ಇನ್ನೊಬ್ಬ ಭಾರತೀಯನೂ ಇದ್ದಾನೆ! ಆತ ಯಶಸ್ವಿ ಕೋಚ್!
Recommended image3
ಅಭಿಷೇಕ್ ಶರ್ಮಾ ಸಿರೀಸ್‌ 'ಡಕ್ ಔಟ್': ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಆದ ಸೋದರಿ ಕೋಮಲ್!
Related Stories
Recommended image1
'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು': ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?
Recommended image2
ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved