ಟೀಂ ಇಂಡಿಯಾದ ಮಾಜಿ ನಾಯಕ ಧೋನಿಗೆ ಸಿಕ್ಕಿದೆ 2019ರ ವಿಶ್ವಕಪ್ಗೆ ಡೈರೆಕ್ಟ್ ಎಂಟ್ರಿ. ತಂಡದ ಬಿಗ್ ಬಾಸ್ನಿಂದಲೇ ಹೊರ ಬಿದ್ದಿದೆ ಬಿಗ್ ನ್ಯೂಸ್. ಒಂದೇ ಸೀರಿಸ್ನಲ್ಲಿ ಬುದ್ಧಿ ಕಲಿತ ಟೀಂ ಇಂಡಿಯಾ ಕೋಚ್ ಅಂದು ಮಾಡಿದ್ದ ಎಡವಟ್ಟಿಗೆ ಇಂದು ತಿಪ್ಪೆ ಸಾರಿಸಿದ ರವಿಶಾಸ್ತ್ರಿ.
ಸರಿಯಾಗಿ 2 ತಿಂಗಳ ಹಿಂದೆ. ಕೊಹ್ಲಿಯ ಕೈಗೊಂಬೆ ಎಂದೇ ಕರೆಯಿಸಿಕೊಂಡಿರುವ ರವಿಶಾಸ್ತ್ರಿಯ ಹೇಳಿಕೆಗೆ ಮಿತಿಯೇ ಇರಲಿಲ್ಲ. ಅಂದು ಕೊಹ್ಲಿಯನ್ನ ಮನವೊಲಿಸಲು ಇಲ್ಲ ಸಲ್ಲದ ಹೇಳಿಕೆಗಳನ್ನ ನೀಡುತ್ತಿದ್ರು. ಹಾಗೆ ಕೊಟ್ಟ ಒಂದು ಹೇಳಿಕೆಯೇ ಧೋನಿ ಮತ್ತು ಯುವಿ 2019ರ ವಿಶ್ವಕಪ್ ಆಡೋದು ಡೌಟ್ ಎಂದಿದ್ದರು. ಶಾಸ್ತ್ರಿಯ ಆ ಮಾತುಗಳನ್ನ ಕೇಳಿ ಅಂದು ಧೋನಿ ಫ್ಯಾನ್ಸ್ ಒಂದು ಕ್ಷಣ ದಂಗಾಗಿ ಹೋಗಿದ್ರು.
ನಿಣಾರ್ಯಕ ಸರಣಿಯಲ್ಲಿ ಶಾಸ್ತ್ರಿಗೆ ಧೋನಿ ತಿರುಗೇಟು
ಧೋನಿ ವಿರುದ್ಧದ ಮಾತಿಗೆ ಧೋನಿಯಷ್ಟೇ ಅಲ್ಲ ಅವರ ಅಭಿಮಾನಿಗಳು ದಂಗಾಗಿದ್ದರು. ಧೋನಿ ಯುಗಾಂತ್ಯವಾಗ್ತಿದ್ಯಾ ಅಂತ ಚಿಂತೆಗೀಡಾಗಿದ್ರು. ಲಂಕಾ ವಿರುದ್ಧದ ಸರಣಿ ಧೋನಿಗೆ ಡು ಆರ್ ಡೈ ಸರಣಿಯಾಗಿತ್ತು. ಆದ್ರೆ ಛಲದಂಕ ಧೋನಿ ಮಾಡು ಇಲ್ಲವೆ ಮಡಿ ಸರಣಿಯಲ್ಲಿ ಅಬ್ಬರಿಸಿದ್ದರು. ಒಂದರ ಬಳಿಕ ಒಂದರಂತೆ ಅದ್ಭುತ ಪ್ರದರ್ಶನ ನೀಡಿ ಕೊಹ್ಲಿ ಗುರುವಿಗೆ ತಿರುಗೇಟು ನೀಡಿದ್ರು.
ಲಂಕಾ ಸರಣಿ ನಂತರ ಮಾತು ಬದಲಿಸಿದ ಶಾಸ್ತ್ರಿ
ಧೋನಿ ಮುಂದಿನ ವಿಶ್ವಕಪ್ಗೆ ಡೌಟ್ ಎಂದಿದ್ದ ಅದೇ ಶಾಸ್ತ್ರಿ ಈಗ ಮಾತು ಬದಲಿಸಿದ್ದಾರೆ. ಒಂದೇ ಸರಣಿಯಲ್ಲಿ ತನ್ನ ಹೇಳಿಕೆಯನ್ನ ತಿರುಗಿಸಿದ್ದಾರೆ. ಅಂದು ಮಹಿ ಲಾಯಕ್ಕಿಲ್ಲ ಅಂದವರು ಇಂದು 2019ರ ವಿಶ್ವಕಪ್ನಲ್ಲಿ ಧೋನಿ ಆಡಿಯೇ ತಿರುತ್ತಾರೆ ಅಂತ ಹೇಳಿಕೆ ನೀಡಿದ್ದಾರೆ.
ಇನ್ನೂ ಮುಂದೆ ಧೋನಿಗಿರೋದಿಲ್ಲ ಡು ಆರ್ ಡೈ ಸ್ಥಿತಿ
ಧೋನಿಗೆ ಇನ್ಮುಂದೆ ಅಂದ್ರೆ ಆತ ಸ್ವಯಂ ನಿವೃತ್ತಿ ಘೋಷಿಸೋವರೆಗೆ ಯಾವುದೇ ಹಂತದಲ್ಲೂ ಡು ಆರ್ ಡೈ ಅನ್ನೋ ಪರಿಸ್ಥಿತಿ ಇರೋದಿಲ್ಲ. ಅಷ್ಟೇ ಅಲ್ಲ ಮುಂದಿನ 2019ರ ವಿಶ್ವಕಪ್ನಲ್ಲೂ ಮಹಿ ಆಡೋದು ಕೂಡ ಕನ್ಫರ್ಮ್ ಆಗಿದೆ. ಶಾಸ್ತ್ರಿಯ ಇಂದಿನ ಹೇಳಿಕೆಯಿಂದ ಧೋನಿ ಫ್ಯಾನ್ಸ್ ನಿರಾಳರಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಆರಾಧ್ಯ ದೈವಾ ಇನ್ನಷ್ಟು ಕಾಲ ಕ್ರಿಕೆಟ್ನಲ್ಲಿ ಮುಂದುವರಿಯಲ್ಲಿದ್ದಾರೆ ಅನ್ನೋ ಸಂಭ್ರಮ.
