ನಿಯಮದಂತೆ ಕ್ಷೇತ್ರ ರಕ್ಷಣೆ ಮಾಡುವ ತಂಡದ ನಾಯಕ ಅಂಪೈರ್ ಬಳಿ ಡಿಆರ್'ಎಸ್'ಗೆ ಮನವಿ ಮಾಡಬೇಕು.

ನವದೆಹಲಿ(ಜ.16): ಧೋನಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜಿನಾಮೆ ಕೊಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ಮೊದಲೇ ಡಿಆರ್'ಎಸ್'ಗೆ ಮನವಿ ಮಾಡುವ ಮೂಲಕ ಸಾಕಷ್ಟು ಅಚ್ಚರಿ ಮೂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಇಯಾನ್ ಮಾರ್ಗನ್ ಬ್ಯಾಟ್ ಸವರಿದ ಚೆಂಡು ಕೀಪರ್ ಧೋನಿಯ ಕೈ ಸೇರಿತು. ಪಾಂಡ್ಯ ಸೇರಿದಂತೆ ಇಡೀ ತಂಡವೇ ಔಟ್'ಗೆ ಮನವಿ ಮಾಡಿದರೂ ಅಂಪೈರ್ ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವೇಳೆ ತಡ ಮಾಡದ ಧೋನಿ ನಾಯಕ ಕೊಹ್ಲಿಗಿಂತ ಮೊದಲ ಡಿಆರ್'ಎಸ್'ಗಾಗಿ ಮನವಿ ಮಾಡಿದರು...

ನಿಯಮದಂತೆ ಕ್ಷೇತ್ರ ರಕ್ಷಣೆ ಮಾಡುವ ತಂಡದ ನಾಯಕ ಅಂಪೈರ್ ಬಳಿ ಡಿಆರ್'ಎಸ್'ಗೆ ಮನವಿ ಮಾಡಬೇಕು. ಆದರೆ ಇಲ್ಲಿ ಧೋನಿಯೇ ಮೊದಲು ಡಿಆರ್'ಎಸ್'ಗೆ ಮನವಿ ಸಲ್ಲಿಸಿದ್ದು ನೋಡಿದರೆ, ಧೋನಿಯ ಹವಾ ಇನ್ನೂ ಚಾಲ್ತಿಯಲ್ಲಿದೆ ಇನ್ನುವುದಕ್ಕೆ ಇದೊಂದು ನಿದರ್ಶನವಷ್ಟೆ....