ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್..!
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮೈದಾನ ಪ್ರವೇಶಿಸಿ ಅಂಪೈರ್ ಜತೆ ವಾಗ್ವಾದ ನಡೆಸಿದ ಧೋನಿಯ ಕ್ರಮವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಟು ಶಬ್ಧಗಳಿಂದ ಟೀಕಿಸಿದ್ದಾರೆ.
ನವದೆಹಲಿ[ಏ.14]: ಅಂಪೈರ್ ಜತೆ ವಾಗ್ವಾದ ನಡೆಸಿದ ಪ್ರಕರಣದಲ್ಲಿ ಎಂ.ಎಸ್.ಧೋನಿ ಸುಲಭವಾಗಿ ಪಾರಾದರು. ಅವರನ್ನು 2ರಿಂದ 3 ಪಂದ್ಯಗಳಿಗೆ ನಿಷೇಧಿಸಬೇಕಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಿಸಿದ್ದಾರೆ.
‘ಧೋನಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿತ್ತು. ಎರಡು ಇಲ್ಲವೇ ಮೂರು ಪಂದ್ಯಗಳಿಗೆ ನಿಷೇಧಿಸಬೇಕಿತ್ತು. ಈಗ ಧೋನಿ ಈ ರೀತಿ ಮಾಡಿದ್ದಾರೆ ಎಂದರೆ, ನಾಳೆ ಮತ್ತೊಬ್ಬ ನಾಯಕನೂ ಅದೇ ರೀತಿ ಮಾಡುತ್ತಾನೆ. ಆಗ ಅಂಪೈರ್‌ಗೆ ಏನು ಬೆಲೆ ಇರಲಿದೆ’ ಎಂದು ಸೆಹ್ವಾಗ್, ಧೋನಿ ವಿರುದ್ಧ ಕಿಡಿಕಾಡಿದ್ದಾರೆ.
CSK ಗೆಲುವಿನ ಬೆನ್ನಲ್ಲೇ ಧೋನಿಗೆ ಬಿತ್ತು ಬರೆ..!
ಚೆನ್ನೈ ಸೂಪರ್’ಕಿಂಗ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಹಾಕಿದ ಫುಲ್ ಟಾಸ್ ಎಸೆತವನ್ನು ಅಂಪೈರ್ ಉಲ್ಲಾಸ್ ಘಂಡೆ ಮೊದಲು ನೋಬಾಲ್ ನೀಡಿ ಆ ಬಳಿಕ ಲೆಗ್ ಅಂಪೈರ್ ಆಕ್ಷೆನ್’ಫರ್ಡ್ ಜತೆ ಚರ್ಚಿಸಿ ನೋಬಾಲ್ ಅಲ್ಲವೆಂದು ತೀರ್ಮಾನವಿತ್ತರು. ಆಗ ಧೋನಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು.
ಸಿಕ್ಸರ್ ಬಾರಿಸಿದ ಜಡೇಜಾ ತಲೆ ಮೇಲೆ ಹೊಡೆದ ಧೋನಿ!
ಐಸಿಸಿ ನೀತಿ ಸಂಹಿತೆ ಪ್ರಕಾರ ಅಂಪೈರ್ ನಿರ್ಧಾರ ಪ್ರಶ್ನಿಸಿ ಕಟು ಪದಗಳನ್ನು ಬಳಸಿದರೆ, ಇಲ್ಲವೇ ಅನುಚಿವಾಗಿ ವರ್ತಿಸಿದರೆ ಗರಿಷ್ಠ ಒಂದು ಟೆಸ್ಟ್ ಇಲ್ಲವೇ ಎರಡು ಏಕದಿನ ಪಂದ್ಯಗಳ ಮಟ್ಟಿಗೆ ಆಟಗಾರನ ಮೇಲೆ ನಿಷೇಧ ಹೇರಬಹುದಾಗಿದೆ.