ಜೈಪುರ[ಏ.12]: ಅಂಪೈರ್ ನಿರ್ಣಯ ಪ್ರಶ್ನಿಸಿ ಮೈದಾನ ಪ್ರವೇಶಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚೆನ್ನೈ ಸೂಪರ್’ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬಿಸಿಸಿಐ ಶಾಕ್ ನೀಡಿದ್ದು ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಿದೆ. ಆದರೆ ನಿಷೇಧ ಶಿಕ್ಷೆಯಿಂದ ಬಚಾವಾಗಿದೆ. 

ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ತಾಳ್ಮೆ ಕಳೆದುಕೊಂಡು ಮೈದಾನಕ್ಕೆ ನುಗ್ಗಿದ ಅಪರೂಪದ ಘಟನೆಗೆ ಜೈಪುರದ ಸವಾಯಿ ಮಾನ್’ಸಿಂಗ್ ಮೈದಾನ ಸಾಕ್ಷಿಯಾಯಿತು. ಅಂಪೈರ್ ಉಲ್ಲಾಸ್ ಘಂಡೆ ನೋಬಾಲ್ ಕುರಿತಂತೆ ನೀಡಿದ ನಿರ್ಧಾರ ಪ್ರಶ್ನಿಸಿ ಡಗೌಟ್’ನಲ್ಲಿದ್ದ ಧೋನಿ ಅಂಪೈರ್’ಗೆ ಜತೆ ವಾಗ್ವಾದ ನಡೆಸಿದರು. 

ಸಿಕ್ಸರ್ ಬಾರಿಸಿದ ಜಡೇಜಾ ತಲೆ ಮೇಲೆ ಹೊಡೆದ ಧೋನಿ!

ಐಪಿಎಲ್ ನೀತಿ ಸಂಹಿತೆ 2ನೇ ಹಂತ ಉಲ್ಲಂಘನೆ ಮಾಡಿದ್ದಕ್ಕಾಗಿ ಚೆನ್ನೈ ಸೂಪರ್’ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. 

ಕೊನೆಯ ಓವರ್ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಹಾಕಿದ ಫುಲ್ ಟಾಸ್ ಎಸೆತವನ್ನು ಅಂಪೈರ್ ಉಲ್ಲಾಸ್ ಘಂಡೆ ಮೊದಲು ನೋಬಾಲ್ ನೀಡಿ ಆ ಬಳಿಕ ಲೆಗ್ ಅಂಪೈರ್ ಆಕ್ಷೆನ್’ಫರ್ಡ್ ಜತೆ ಚರ್ಚಿಸಿ ನೋಬಾಲ್ ಅಲ್ಲವೆಂದು ತೀರ್ಮಾನವಿತ್ತರು. ಆಗ ಧೋನಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು. 

ಸ್ಯಾಂಟ್ನರ್ ಸಿಕ್ಸರ್: CSKಗೆ ಥ್ರಿಲ್ಲರ್ ಜಯ

ಹೀಗಿತ್ತು ಆ ಕ್ಷಣ:

ಐಸಿಸಿ ನೀತಿ ಸಂಹಿತೆ ಪ್ರಕಾರ ಅಂಪೈರ್ ನಿರ್ಧಾರ ಪ್ರಶ್ನಿಸಿ ಕಟು ಪದಗಳನ್ನು ಬಳಸಿದರೆ, ಇಲ್ಲವೇ ಅನುಚಿವಾಗಿ ವರ್ತಿಸಿದರೆ ಗರಿಷ್ಠ ಒಂದು ಟೆಸ್ಟ್ ಇಲ್ಲವೇ ಎರಡು ಏಕದಿನ ಪಂದ್ಯಗಳ ಮಟ್ಟಿಗೆ ಆಟಗಾರನ ಮೇಲೆ ನಿಷೇಧ ಹೇರಬಹುದಾಗಿದೆ.