ಜುಲೈ 2015ರಲ್ಲಿ ಸಿಎಸ್'ಕೆ ಹಾಗೂ ಆರ್'ಆರ್ ತಂಡಗಳ ಮಾಲೀಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರಿಂದ ಎರಡು ಐಪಿಎಲ್ ಅವತರಣಿಕೆಗಳ ಮಟ್ಟಿಗೆ ಬ್ಯಾನ್ ಮಾಡಲಾಗಿತ್ತು. ಈ ತಂಡಗಳ ಬದಲಿಗೆ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳು ಎರಡು ವರ್ಷ ಐಪಿಎಲ್'ನಲ್ಲಿ ಪಾಲ್ಗೊಂಡಿದ್ದವು.

ನವದೆಹಲಿ(ಡಿ.06): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬರುವ ಐಪಿಎಲ್ ಅವತರಣಿಕೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೇರುವ ದಾರಿ ಸುಗಮವಾದಂತಾಗಿದೆ. ಇಂದು ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ 2018ನೇ ಸಾಲಿನ ಐಪಿಎಲ್'ನಲ್ಲಿ ಮೂವರು ಆಟಗಾರರನ್ನು ಪ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಐಪಿಎಲ್ ಆಡಳಿತ ಮಂಡಳಿ ಜೊತೆ ಆಡಳಿತಾತ್ಮಕ ಸಮಿತಿ ಆಟಗಾರರನ್ನು ಉಳಿಸಿಕೊಳ್ಳುವಿಕೆ, ಸಂಬಳ ಮುಂತಾದ ವಿಚಾರಗಳ ಕುರಿತಂತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.

ಚೆನ್ನೈ ಸೂಪರ್'ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ತಮ್ಮ ತಂಡಗಳಲ್ಲಿದ್ದ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ.

ಜುಲೈ 2015ರಲ್ಲಿ ಸಿಎಸ್'ಕೆ ಹಾಗೂ ಆರ್'ಆರ್ ತಂಡಗಳ ಮಾಲೀಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರಿಂದ ಎರಡು ಐಪಿಎಲ್ ಅವತರಣಿಕೆಗಳ ಮಟ್ಟಿಗೆ ಬ್ಯಾನ್ ಮಾಡಲಾಗಿತ್ತು. ಈ ತಂಡಗಳ ಬದಲಿಗೆ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳು ಎರಡು ವರ್ಷ ಐಪಿಎಲ್'ನಲ್ಲಿ ಪಾಲ್ಗೊಂಡಿದ್ದವು.

2018ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಡೆಯಲಿದೆ.