Asianet Suvarna News Asianet Suvarna News

ಧೋನಿ ನಿವೃತ್ತಿ ಒತ್ತಡ; ಯುವರಾಜ್ ಸಿಂಗ್ ಪ್ರತಿಕ್ರಿಯೆಗೆ ಎಲ್ಲರೂ ಗಪ್‌ಚುಪ್!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿಗೆ ಒತ್ತಡ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಧೋನಿ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

MS Dhoni only can take his future cal says yuvraj singh
Author
Bengaluru, First Published Sep 24, 2019, 10:18 PM IST

ನವದೆಹಲಿ(ಸೆ.24): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ವಿಶ್ವಕಪ್ ಟೂರ್ನಿ ಬಳಿಕ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ಸರಣಿಯಿಂದ ದೂರ ಉಳಿದಿರುವ ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕೆಲ ಮಾಜಿ ಕ್ರಿಕೆಟಿಗರೂ ನಿವೃತ್ತಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: ಧೋನಿ ನಿವೃತ್ತಿಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗಂಗೂಲಿ..!

ಭಾರತೀಯ ಕ್ರಿಕೆಟ್‌ಗೆ ಧೋನಿ ಕೂಡುಗೆ ಅಪಾರ. ಧೋನಿ ನಿವೃತ್ತಿಗೆ ಒತ್ತಾಯಿಸುವುದು ಸರಿಯಲ್ಲ. ಈ ಕುರಿತು ಧೋನಿ ನಿರ್ಧಾರ ತೆಗೆದುಕೊಳ್ಳಲು ಶಕ್ತರಾಗಿದ್ದಾರೆ. ಟೀಂ ಇಂಡಿಯಾ ಕಂಡ  ಯಶಸ್ವಿ ನಾಯಕ ಧೋನಿ. ನಿವೃತ್ತಿ ಕುರಿತು ಧೋನಿಗೆ  ನಾವು ಒತ್ತಡ ತರುವುದು ಸೂಕ್ತವಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಟ್ವೀಟ್ ಮಾಡೋವಾಗ ಇನ್ಮೇಲೆ ಯೋಚನೆ ಮಾಡ್ತಿನಿ ಕೊಹ್ಲಿ!

ಧೋನಿ ಟೀಂ ಇಂಡಿಯಾಗೆ ಆಡಲು ಸಿದ್ದರಿದ್ದರೆ ನಿರ್ಧಾರವನ್ನು ನಾವು ಗೌರವಿಸಬೇಕು. ಯಾವಗ ನಿವೃತ್ತಿಯಾಗಬೇಕು ಅನ್ನುವುದು ಧೋನಿ ನಿರ್ಧರಿಸಲಿದ್ದಾರೆ ಎಂದು ಯುವಿ ಹೇಳಿದ್ದಾರೆ. ಧೋನಿ ನಿವೃತ್ತಿಗೆ ಆಗ್ರಹಿಸುವುದು ಸುಲಭ, ಆದರೆ ಧೋನಿ ಸ್ಥಾನ ತುಂಬುವುದ ಕಷ್ಟ ಎಂದಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಭಾರತೀಯ ಸೇನೆ ಸೇರಿಕೊಂಡಿದ್ದರು. ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಸೈನಿಕನಾಗಿ ದೇಶ ಸೇವೆ ಮಾಡಿದ್ದರು. ಇದಕ್ಕಾಗಿ ಧೋನಿ, ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಬಳಿಕ ಸೌತ್ ಆಫ್ರಿಕಾ ವಿರುದ್ಧದ ಸರಣಿಗೂ ಧೋನಿ ಅಲಭ್ಯರಾಗಿದ್ದರು.

ಇದನ್ನೂ ಓದಿ: ಧೋನಿ ಭವಿಷ್ಯದ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬನ್ನಿ: ಕುಂಬ್ಳೆ

ಇದೀಗ ನವೆಂಬರ್ ವರೆಗೆ ಧೋನಿ ಅಲಭ್ಯರಾಗಿದ್ದಾರೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿ ಸೇರಿದಂತೆ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಧೋನಿ ಲಭ್ಯವಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ. 

Follow Us:
Download App:
  • android
  • ios