ಎಂ ಎಸ್ ಧೋನಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯರು. ಇದೀಗ ಧೋನಿ, ರಜನಿಕಾಂತ್ ಸ್ಟೈಲ್‌ನಲ್ಲಿ ಸೈಕಲ್ ಏರಿ ಸ್ಟಂಟ್ ಮಾಡಿದ್ದಾರೆ. ಧೋನಿಯ ನೂತನ ಸ್ಟೆಂಟ್ ಹೇಗಿದೆ? ಇಲ್ಲಿದೆ ವೀಡಿಯೋ.

ರಾಂಚಿ(ಜು.31): ತಮಿಳುನಾಡು ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿಯನ್ನ ಕ್ರಿಕೆಟ್ ತಲೈವಾ ಎಂದೇ ಕರೆಯುತ್ತಾರೆ. ಇದೀಗ ಇದೇ ಎಂ ಎಸ್ ಧೋನಿ ರಜನಿಕಾಂತ್ ರೀತಿಯಲ್ಲೇ ಸ್ಟೈಲ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ತವರಿಗೆ ವಾಪಾಸ್ಸಾಗಿರೋ ಎಂ ಎಸ್ ಧೋನಿ ವಿಶ್ರಾಂತಿಯಲ್ಲಿದ್ದಾರೆ. ಇದೇ ವೇಳೆ ಧೋನಿ ತಮ್ಮ ಮನೆಯ ಮುಂಭಾಗದಲ್ಲಿ ಸೈಕಲ್ ಏರಿ ಸ್ಟಂಟ್ ಪ್ರದರ್ಶಿಸಿದ್ದಾರೆ.

View post on Instagram

ಸೈಕಲ್ ಏರಿದ ಧೋನಿ, ರಜನಿಕಾಂತ್ ಸ್ಟೈಲ್‌ನಲ್ಲಿ ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಇಷ್ಟೇ ಅಲ್ಲ ಕಿವಿಗೆ ಹೆಡ್‌ಫೋನ್, ಜೊತೆಗೆ ಬಾಯಲ್ಲಿ ಕೋಲು ಕಚ್ಚಿ ಸವಾರಿ ಮಾಡಿದ್ದಾರೆ. ಅದು ಕೂಡ ಮಳೆಯಲ್ಲಿ. ಈ ವೀಡಿಯೋವನ್ನ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಧೋನಿ, ತಮಾಷೆಗಾಗಿ ನೀವು ಮನೆಯಲ್ಲಿ ಪ್ರಯತ್ನಿಸಿ ಎಂದು ಬರೆದಿದ್ದಾರೆ.

ಇದನ್ನು ಓದಿ: ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ

ಧೋನಿ ರೀತಿ ಸೈಕಲ್‌ನಲ್ಲಿ ಸ್ಟಂಟ್ ಮಾಡಿರೋ ಕಾರಣ ಏನು ಅನ್ನೋದು ಬಹಿರಂಗವಾಗಿಲ್ಲ. ಆದರೆ ಮೂಲಗಳ ಪ್ರಕಾರ ಜಾಹೀರಾತಿಗಾಗಿ ಧೋನಿ ಈ ಸ್ಟಂಟ್ ಮಾಡಿದ್ದಾರೆ. 37ರ ಹರೆಯದ ಧೋನಿ ಈಗಲೂ ಅಷ್ಟೇ ಫಿಟ್ ಆಗಿದ್ದಾರೆ. ಹೀಗಾಗಿ ಮೈದಾನದಲ್ಲಾಗಲಿ ಅಥವಾ ಈ ರೀತಿಯ ಸ್ಟಂಟ್ ಆಗಲಿ ಧೋನಿಗೆ ಯಾವುದು ಕಷ್ಟವಲ್ಲ.

ಇದನ್ನು ಓದಿ: ಕೊಹ್ಲಿಯನ್ನ ಔಟ್ ಮಾಡೋದು ಹೇಗೆ? ಸ್ಟುವರ್ಟ್ ಬ್ರಾಡ್ ಹೇಳಿದ್ರು ಸೀಕ್ರೆಟ್!