ಬರ್ಮಿಂಗ್‌ಹ್ಯಾಮ್(ಜು.31): ಇಂಗ್ಲೆಂಡ್ ಪದ್ದತಿ ಪ್ರಕಾರ ಪ್ರತಿ ಟೆಸ್ಟ್ ಪಂದ್ಯದ ಹಿಂದಿನ ದಿನವೇ ಹನ್ನೊಂದು ಆಟಗಾರರ ತಂಡವನ್ನ ಪ್ರಕಟಿಸಲಾಗುತ್ತದೆ. ಇದೀಗ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಇಂಗ್ಲೆಂಡ್ ತಂಡನ್ನ ಪ್ರಕಟಿಸಲಾಗಿದೆ.

ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಪ್ಲೇಯಿಂಗ್ 11 ನಲ್ಲಿ ಜೋಸ್ ಬಟ್ಲರ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಏಕದಿನ ತಂಡದ ಉಪನಾಯಕನಾಗಿರುವ ಜೋಸ್ ಬಟ್ಲರ್ ಇದೇ ಮೊದಲ ಬಾರಿಗೆ ಟೆಸ್ಟ್ ಉಪನಾಯಕನ ಸ್ಥಾನ ನೀಡಲಾಗಿದೆ.

ವಿಶೇಷ ಅಂದರೆ ಟೆಸ್ಟ್ ಮಾದರಿಗೆ ಕಮ್‌ಬ್ಯಾಕ್ ಮಾಡಿದ ಸ್ಪಿನ್ನರ್ ಆದಿಲ್ ರಶೀದ್ ಕೂಡ ಸ್ಥಾನ ಪಡೆದಿದ್ದಾರೆ. ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹನ್ನೊಂದರ ಬಳಗಲ್ಲಿದ್ದಾರೆ. ಹೀಗಾಗಿ ಬರ್ಮಿಂಗ್‌ಹ್ಯಾಮ್ ಪಂದ್ಯ ಮತ್ತಷ್ಟು ರೋಚಕವಾಗಲಿದೆ.

 

 

ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ), ಜೋಸ್ ಬಟ್ಲರ್(ಉಪನಾಯಕ), ಆಲಿಸ್ಟರ್ ಕುಕ್, ಕೆಟನ್ ಜೆನ್ನಿಂಗ್ಸ್, ಜಾನಿ ಬೈರಿಸ್ಟೋ, ಬೆನ್ ಸ್ಟೋಕ್ಸ್, ಡೇವಿಡ್ ಮಲಾನ್, ಸ್ಯಾಮ್ ಕುರ್ರನ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಆದಿಲ್ ರಶೀದ್