ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಐತಿಹಾಸಿಕ ಸಾಧನೆಗೆ ಸಜ್ಜಾಗಿದ್ದಾರೆ. ಧೋನಿ ಇನ್ನು 1 ರನ್ ಸಿಡಿಸಿದರೆ ಮತ್ತೊಂದು ದಾಖಲೆ ಬರೆಯಲಿದ್ದಾರೆ.
ತಿರುವನಂತಪುರುಂ(ಅ.31): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಬ್ಯಾಟಿಂಗ್ ಇದೀಗ ಎಲ್ಲಡೆಗೆ ಚರ್ಚೆಗೆ ಗ್ರಾಸವಾಗುತ್ತಿದೆ. ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿರುವ ಧೋನಿ ಇದೀಗ ಐತಿಹಾಸಿಕ ಸಾಧನೆಗೆ ಸಜ್ಜಾಗಿದ್ದಾರೆ. ಈ ಸಾಧನೆಗೆ ಧೋನಿಗಿನ್ನು ಕೇವಲ 1 ರನ್ ಸಾಕು.
ಭಾರತದ ಪರ 10,000 ರನ್ ಸಿಡಿಸಿದ ಸಾಧನೆಗೆ ಧೋನಿಗಿನ್ನು 1 ರನ್ ಅವಶ್ಯಕತೆ ಇದೆ. ಧೋನಿ ಭಾರತದ ಪರ 9999 ರನ್ ಸಿಡಿಸಿದ್ದಾರೆ. ಏಕದಿನದಲ್ಲಿ ಎಂ.ಎಸ್ ಧೋನಿ ಈಗಾಗಲೇ 10,000 ರನ್ ಪೂರೈಸಿದ್ದಾರೆ. ಆದರೆ ಏಷ್ಯಾ 11 ಪರ ಆಡಿರುವ ಧೋನಿ 174 ರನ್ ಸಿಡಿಸಿದ್ದಾರೆ. ಹೀಗಾಗಿ ಇದೀಗ ಭಾರತ ತಂಡವನ್ನ ಪ್ರತಿನಿಧಿಸಿ 10,000 ರನ್ ಸಾಧನೆಗೆ 1 ರನ್ ಮಾತ್ರ ಬೇಕಿದೆ.
ಭಾರತದ ಪರ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಎಂ.ಎಸ್ ಧೋನಿ ಕೂಡ ಟೀಂ ಇಂಡಿಯಾ ಪರ 10 ಸಾವಿರ ರನ್ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಧೋನಿ 10 ಸಾವಿರ ರನ್ ಸಾಧನೆ ಮಾಡೋ ಸಾಧ್ಯತೆ ಇದೆ. ಈ ಮೂಲಕ ಧೋನಿ ಮತ್ತೆ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲಿ.
