12ನೇ ಆವೃತ್ತಿಯ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಕೇವಲ 56 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ್ದಾರೆ. 9 ಸಿಕ್ಸರ್‌ಗಳೊಂದಿಗೆ 163 ರನ್ ಬಾರಿಸಿದ ಅವರು, 10 ದಿನಗಳ ಅಂತರದಲ್ಲಿ ಎರಡನೇ ಶತಕ ಸಿಡಿಸಿ ತಮ್ಮ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ.

ದುಬೈ: 12ನೇ ಆವೃತ್ತಿಯ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಕ್ಷರಶಃ ಅಬ್ಬರಿಸಿದ್ದಾರೆ. ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಯುಎಇ ಎದುರು ಭಾರತದ ವೈಭವ್ ಸೂರ್ಯವಂಶಿ ಕೇವಲ 56 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆತಿಥೇಯ ಯುಎಇ ಎದುರು ವೈಭವ್ ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ. ವೈಭವ್ ಶತಕದ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 5 ಆಕರ್ಷಕ ಬೌಂಡರಿಗಳು ಸೇರಿವೆ. ಸದ್ಯ ಭಾರತ 30 ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿದೆ. ವೈಭವ್ ಸೂರ್ಯವಂಶಿ 163 ರನ್ ಸಿಡಿಸಿದ್ದು ದ್ವಿಶತಕದತ್ತ ದಾಪುಗಾಲಿಡುತ್ತಿದೆ.

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಆರಂಭಿಸಿದ ವೈಭವ್ ಸೂರ್ಯವಂಶಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಬಳಿಕವೂ ಸೂರ್ಯವಂಶಿ ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

10 ದಿನಗಳ ನಂತರ ಎರಡನೇ ಶತಕ ಚಚ್ಚಿದ ವೈಭವ್ ಸೂರ್ಯವಂಶಿ:

ಭಾರತದ ಪ್ರತಿಭಾನ್ವಿತ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 10 ದಿನಗಳ ಅಂತರದಲ್ಲಿ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೊದಲು ವೈಭವ್ ಸೂರ್ಯವಂಶಿ ಡಿಸೆಂಬರ್ 02ರಂದು ಮಹರಾಷ್ಟ್ರ ಎದುರು ಬಿಹಾರ ಪರ ಅಜೇಯ 108 ರನ್ ಬಾರಿಸಿದ್ದರು. ಇದೀಗ ಅದೇ ಫಾರ್ಮ್ ಮುಂದುವರೆಸುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.

Scroll to load tweet…

ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯಲ್ಲೂ ಸೂರ್ಯವಂಶಿ ಅಬ್ಬರ

14 ವರ್ಷದ ವೈಭವ್ ಸೂರ್ಯವಂಶಿ, ಇದಕ್ಕೂ ಮೊದಲು ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆಗ ಯುಎಇ ಎದುರು ಕೇವಲ 42 ಎಸೆತಗಳಲ್ಲಿ 144 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ 4 ಪಂದ್ಯಗಳನ್ನಾಡಿ 239 ರನ್ ಸಿಡಿಸಿದ್ದರು. ಇದಾದ ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ವೈಭವ್ ಸೂರ್ಯವಂಶಿ ಸ್ಪೋಟಕ ಶತಕ ಸಿಡಿಸಿದ್ದರು.