ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ.ಮೂರನೇ ಓವರ್’ನಲ್ಲೇ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಭುವಿ ಟೀಂ ಇಂಡಿಯಾಗೆ ಮೊದಲ ಯಶಸ್ಸು ದೊರಕಿಸಿಕೊಟ್ಟರು.

ಮೆಲ್ಬರ್ನ್[ಜ.18]: ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚೆಹಲ್ ಮಿಂಚಿನ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೇವಲ 230 ರನ್’ಗಳಿಗೆ ಸರ್ವಪತನ ಕಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಆಸಿಸ್ ಬೆನ್ನೆಲುಬು ಮುರಿದ ಚೆಹಲ್ 6 ವಿಕೆಟ್ ಕಬಳಿಸಿದರೆ, ವೇಗಿಗಳಾದ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ಈ ಪಂದ್ಯ ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದ್ದು, ಭಾರತ 231 ರನ್ ಗುರಿ ತಲುಪಿದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ಭಾರತ ಇದುವರೆಗೂ ಆಸಿಸ್ ನೆಲದಲ್ಲಿ ದ್ವಿಪಕ್ಷೀಯ ಸರಣಿ ಜಯಿಸಿಲ್ಲ. ಈ ಪಂದ್ಯವನ್ನು ವಿರಾಟ್ ಪಡೆ ಜಯಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

Scroll to load tweet…

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ.ಮೂರನೇ ಓವರ್’ನಲ್ಲೇ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಭುವಿ ಟೀಂ ಇಂಡಿಯಾಗೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಇದಾದ ಕೆಲಹೊತ್ತಿನಲ್ಲೇ ಫಿಂಚ್ ಕೂಡಾ ಭುವಿಗೆ ಎರಡನೇ ಬಲಿಯಾದರು. ಈ ಸರಣಿಯಲ್ಲಿ ಫಿಂಚ್ ಮೂರನೇ ಬಾರಿಗೆ ಭುವಿಗೆ ವಿಕೆಟ್ ಒಪ್ಪಿಸಿದರು. 

ಜಾದೂ ಮಾಡಿದ ಚೆಹಲ್: ಪಂದ್ಯದ 24ನೇ ಓವರ್’ನಲ್ಲಿ ದಾಳಿಗಿಳಿದ ಚೆಹಲ್ ಮೊದಲ ಓವರ್’ನಲ್ಲೇ 2 ವಿಕೆಟ್ ಕಬಳಿಸುವ ಮೂಲಕ ಆಸಿಸ್’ಗೆ ಎಚ್ಚರಿಕೆ ನೀಡಿದರು. ಇದಾದ ಬಳಿಕ ನಿರಂತರ ವಿಕೆಟ್ ಕಬಳಿಸುತ್ತಾ ಸಾಗಿದ ಚೆಹಾಲ್ ಎರಡನೇ ಬಾರಿಗೆ 5+ ವಿಕೆಟ್ ಸಾಧನೆ ಮಾಡಿದರು. ಕೇವಲ 42 ರನ್ ನೀಡಿ ಆಸಿಸ್’ನ ಪ್ರಮುಖ 6 ವಿಕೆಟ್ ಕಬಳಿಸುವಲ್ಲು ಚೆಹಲ್ ಯಶಸ್ವಿಯಾದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ 6 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಸ್ಪಿನ್ನರ್ ಎನ್ನುವ ಕೀರ್ತಿಗೆ ಚೆಹಲ್ ಪಾತ್ರರಾದರು. ಈ ಮೊದಲು 1991ರಲ್ಲಿ ರವಿಶಾಸ್ತ್ರಿ 15 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. 

ಪೀಟರ್ ಹ್ಯಾಂಡ್ಸ್’ಕಂಬ್ ಏಕಾಂಗಿ ಹೋರಾಟ: ಆಸಿಸ್ ಪರ ಖ್ವಾಜಾ, ಮಾರ್ಷ್ ಉತ್ತಮ ಜತೆಯಾಟವಾಡಿದಾದರೂ ದೊಡ್ಡ ಮೊತ್ತ ಪೇರಿಸಲು ವಿಫಲವಾದರು. ಆದರೆ ಪೀಟರ್ ಹ್ಯಾಂಡ್ಸ್’ಕಂಬ್ 58 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಹ್ಯಾಂಡ್ಸ್’ಕಂಬ್, ಚೆಹಲ್’ಗೆ ವಿಕೆಟ್ ಒಪ್ಪಿಸುವ ಮುನ್ನ 63 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 58 ರನ್ ಬಾರಿಸಿದರು.